top of page
poorna drishti

ಗಿರೀಶ್ ಕಾರ್ನಾಡರ ರಾಕ್ಷಸ-ತಂಗಡಿ ನಾಟಕದ ವಿಶ್ಲೇಷಣೆ

Research Scholar, Kannada Bharathi

Kuvempu University, manjumt94@gmail.com


ಕಾರ್ನಾಡರ ನಾಟಕಗಳ ನಾವೀನ್ಯತೆಗೆ ಪೂರಕವಾಗಿ ಕಾರ್ನಾಡರ ಸಂಕೀರ್ಣ ವ್ಯಕ್ತಿತ್ವವು ಸೇರಿದೆ. ಅವರು ಎಲ್ಲಾ ನಾಟಕಗಳನ್ನು ಮೊದಲು ಕನ್ನಡದಲ್ಲಿ ಬರೆದು ಅನಂತರ ಅನುವಾದಿಸಿದ್ದಾರೆ. ಅವರ ಎಲ್ಲ ನಾಟಕಗಳು ಸಂವೇದನೆಯನ್ನು ಒಳಗೊಂಡಿದ್ದು, ಪಾತ್ರಗಳೆ ಇಲ್ಲಿ ಕೇಂದ್ರಬಿAದು. ಕಾರ್ನಾಡರ ನಾಟಕಗಳಲ್ಲಿ ಎದ್ದುಕಾಣುವುದು ಇತಿಹಾಸ, ಜಾನಪದ ಹಾಗೂ ಪುರಾಣವನ್ನು ಸಮಕಾಲೀನ ಸಂದರ್ಭದಲ್ಲಿ ವಿಶ್ಲೇಷಿಸುವುದು. ಕಾರ್ನಾಡರ ನಾಟಕಗಳ ಹೆಚ್ಚುಗಾರಿಕೆ ಅದಕ್ಕೆ ಅವರು ಹೊಸ ತಂತ್ರಗಳನ್ನು ದುಡಿಸಿಕೊಂಡಿದ್ದಾರೆ. ವಿಡಂಬನೆಗಳ ಮೂಲಕ ಗಂಭೀರವಾದ ಅರ್ಥ ಪ್ರತಿಯನ್ನು ಸೃಷ್ಟಿಸುವ ಕಾರ್ಯ ಅವರ ನಾಟಕಗಳಲ್ಲಿ ದಟ್ಟವಾಗಿ ಸಾಗಿದೆ. ಮನುಷ್ಯನ ಮುಖವಾಡವನ್ನು ಕಳಚಿ ವಾಸ್ತವವನ್ನು ತೆರೆದು ತೋರುವುದು ಅವರ ನಾಟಕಗಳ ವೈಶಿಷ್ಟö್ಯ.


ಕಾರ್ನಾಡರ ನಾಟಕಗಳಲ್ಲಿ ಕಂಡುಬರುವ ರಂಗ ಸಾಧ್ಯತೆ ಇನ್ನೊಂದು ಉಲ್ಲೇಖನೀಯ ಅಂಶ. ಅವರು ತಮ್ಮ ನಾಟಕಗಳಲ್ಲಿ ವಾಚಿಕ, ಆಂಗಿಕ, ಸಾತ್ವಿಕಗಳನ್ನೆಲ್ಲಾ ಏಕಾಗ್ರತೆಗೊಳಿಸಿರುವುದು ಮಹತ್ವದ ಸಂಗತಿ. ಜಾನಪದದ ದೇಸಿ ರಂಗಭೂಮಿಯ ಸತ್ವವನ್ನು ಅವರು ತಮ್ಮ ನಾಟಕಗಳ ಯಶಸ್ಸಿಗೆ ದುಡಿಸಿಕೊಂಡಿದ್ದಾರೆ. ಹಯವದನ, ನಾಗಮಂಡಲ ಮೊದಲಾದ ನಾಟಕಗಳಲ್ಲಿ ಮನುಷ್ಯ ಸಂಘರ್ಷದ ಮುಖಗಳ ಚಿತ್ರಣವೇ ಆಗಿವೆ. ಬದುಕಿನ ನಾನಾ ಘಟನೆಗಳನ್ನು ಪ್ರತೀಕಗಳನ್ನಾಗಿ, ಅನುಭವವನ್ನಾಗಿ ಮಾಡಬಲ್ಲ ತಾಕತ್ತು ಅವರ ನಾಟಕಗಳ ಅಂತಸತ್ವವಾಗಿದೆ.


‘ರಾಕ್ಷಸ ತಂಗಡಿ’ ಗಿರೀಶ್ ಕಾರ್ನಾಡರ ಕೊನೆಯ ನಾಟಕ ಅವರು ಯಾವುದೇ ನಾಟಕವನ್ನು ಬರೆಯುವ ಮೊದಲು ಬಹಳ ಅಧ್ಯಯನಗಳನ್ನು ಕೈಗೊಳ್ಳುತ್ತಾರೆ. ಅದರಲ್ಲೂ ಮುಖ್ಯವಾಗಿ ಐತಿಹಾಸಿಕ ನಾಟಕಗಳನ್ನು ಬರೆಯುವಾಗ ಅವರು ಕೈಗೊಳ್ಳುವ ಅಧ್ಯಯನ ಕ್ರಮ ಗಂಭೀರತೆಯಿAದ ಕೂಡಿರುತ್ತದೆ. ಅದಕ್ಕೆ ಪುಷ್ಟಿ ‘ರಾಕ್ಷಸ ತಂಗಡಿ’ ನಾಟಕಕ್ಕೆ ಬರೆದಿರುವ ಕೃತಜ್ಞತೆಯಲ್ಲಿ ಅದು ಎದ್ದು ಕಾಣುತ್ತದೆ.


ಕಾರ್ನಾಡರು ‘ಕಳೆದ ಸಾವಿರ ವರ್ಷಗಳ ಕರ್ನಾಟಕದ ಇತಿಹಾಸವನ್ನು ನೋಡಿದಾಗ ಮೂರು ಘಟನೆಗಳು ನಮ್ಮ ಕಣ್ಣು ಕುಕ್ಕುತ್ತವೆ ಎಂದು ಹೇಳುತ್ತ ಅದರಲ್ಲಿ ಒಂದಾದ ಟಿಪ್ಪುಸುಲ್ತಾನನ ರಾಜಕಾರಣವನ್ನು ಪ್ರಸ್ತಾಪಿಸುತ್ತಾರೆ. ಅವರೇ ಹೇಳುವಂತೆ “ನಾನು ತಲೆದಂಡ ಹಾಗೂ ಟಿಪೂ ಸುಲ್ತಾನ ಕಂಡ ಕನಸು ನಾಟಕಗಳಲ್ಲಿ ಇದರೊಳಗಿನ ಎರಡು ಘಟನೆಗಳಿಗೆ ನಾಟಕಕಾರನಾಗಿ ಪ್ರತಿ ಸ್ಪಂದಿಸಿದ್ದೇನೆ, ರಾಕ್ಷಸ ತಂಗಡಿ ನಾಟಕ ಮೂರನೆಯದನ್ನು ನನಸಾಗಿಸುವ ಪ್ರಯತ್ನವಾಗಿದೆ.” ಎಂದಿದ್ದಾರೆ.


ಈ ನಾಟಕದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಕೊನೆಯದಾಗಿ ಕಂಡು ಬರುವ ಅಳಿಯ ರಾಮರಾಯನನ್ನು ಕೇಂದ್ರ ಪಾತ್ರವಾಗಿ ಚಿತ್ರಸಿದ್ದಾರೆ. ಕಾರ್ನಾಡರು ನೋಡುವ ದೃಷ್ಟಿಕೋನವೇ ಅಂತಹದ್ದು ಅದಕ್ಕೆ ಅವರ ನಾಟಕಗಳು ರಂಗದ ಮೇಲೆ ಪ್ರದರ್ಶನಗೊಂಡAತೆ, ಹೊಸ ಹೊಸ ಅರ್ಥಗಳನ್ನು ಪಡೆಯುತ್ತಲೇ ಹೋಗುತ್ತವೆೆ. ಒಟ್ಟು ೧೨ ದೃಶ್ಯಗಳಲ್ಲಿ ನಾಟಕ ರೂಪಗೊಂಡಿದೆ. ರಕ್ಕಸತಂಗಡಿ ಅಥವಾ ತಾಳಿಕೋಟೆ ಕದನವನ್ನು ಹಿಂದೂ-ಮುಸ್ಲಿA ಕದನ ಎಂದು ಇತಿಹಾಸದ ಪುಟಗಳಲ್ಲಿ ಅಡಕವಾಗಿದೆ ಮತ್ತು ಹಾಗೆಯೇ ಚಿತ್ರಿಸಲಾಗಿದೆ. ಕಾರ್ನಾಡರು ಇವೆಲ್ಲದರ ಆಚೆಗೆ ಇಲ್ಲಿ ಮತ್ತೊಂದು ಆಯಾಮದಲ್ಲಿ ಹೊಸ ನೋಟದೊಂದಿಗೆ ಈ ನಾಟಕವನ್ನು ಚಿತ್ರಿಸಿದ್ದಾರೆ. ಚರಿತ್ರೆಯಲ್ಲಿ ಅಷ್ಟೇನೂ ಮುಖ್ಯವಾಗಿ ಚಿತ್ರಿಸಿರದ ಅಳಿಯ ರಾಮರಾಯನನ್ನು ಕಾರ್ನಾಡರು ಕೇಂದ್ರ ಪಾತ್ರವಾಗಿ ತೆಗೆದುಕೊಂಡು ನಾಟಕವನ್ನು ರಚಿಸಿದ್ದಾರೆ. ಅಳಿಯ ರಾಮರಾಯನಲ್ಲಿ ಹುದುಗಿರುವ ವಂಶದ ಶ್ರೇಷ್ಠತೆಯ ಅಹಂನ್ನು ನಾಟಕದಲ್ಲಿ ಕಾಣಬಹುದು. ಅದರಾಚೆಗೆ ಮಾನವೀಯ ಸಂಘರ್ಷದ ಕಥೆಯಾಗಿಯೂ ಇದು ರೂಪುಗೊಂಡಿರುವುದು ನಾಟಕದಲ್ಲಿ ಕಾಣಬಹುದಾಗಿದೆ.


ಈ ನಾಟಕ ಕಥೆಯ ಕೇಂದ್ರ ಇರುವುದು ಕಲ್ಯಾಣದಲ್ಲಿ. ಬಿಜಾಪುರದ ಆದಿಲ್‌ಶಾಹಿ ರಾಮರಾಯರನ್ನು ಕಾಣಲಿಕ್ಕೆ ಅರಮನೆಗೆ ಬಂದಿದ್ದಾನೆ, ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ರಾಮರಾಯನನ್ನು ಕಂಡು ತನ್ನನ್ನೇ ತಮ್ಮ ಮಗನೆಂದು ಸ್ವೀಕರಿಸಿ ಅಂತ ಹೇಳುತ್ತಾನೆ. ರಾಮರಾಯನಿಗೆ ಸಂತೋಷವಾಗುತ್ತದೆ. ಕೊನೆಗೆ ಕುಮಾರ ಎಂದು ಕೂಡ ಸಂಬೋಧಿಸಿ ಮಮತೆಯಿಂದ ಕಾಣುತ್ತಾನೆ. ತನ್ನ ತಾಯಿಯ ಹತ್ತಿರ ಕೂಡ ಕರೆದುಕೊಂಡು ಹೋಗಿ ಇನ್ನು ಮುಂದೆ ನಾವು ಒಂದ್ ಆಗಲಿಕ್ಕೆ ಅಡೆ-ತಡೆ ಇಲ್ಲ ಎಂಬ ಮಾತುಗಳನ್ನು ಹೇಳುತ್ತಾನೆ. ಇಬ್ಬರ ಸಂಭಾಷಣೆಯು ನಡೆಯುತ್ತಿರುವಾಗ ರಾಮರಾಯ ಅಹಮದ್ ನಗರದ ಸುಲ್ತಾನ್ ಹುಸೇನ್ ನಿಜಾಂಶಾ ಅವರಿಗೆ ಪತ್ರ ಬರೆದು ಕಲ್ಯಾಣ ಮತ್ತು ಸೊಲ್ಲಾಪುರದ ಕೋಟೆಗಳನ್ನು ನಿಮಗೆ ಒಪ್ಪಿಸಬೇಕು ಅಂತ ಕೇಳಿಕೊಂಡಿದ್ದೀರಲ್ಲವೆ. (ರಕ್ಕಸತಂಗಡಿ ನಾಟಕ ಪು.೨೭) ಆದಿಲ್ ಶಾಯಿನ ಜೊತೆ ರಾಮರಾಯ ತನ್ನ ತಮ್ಮನಾದ ವೆಂಕಟಾದ್ರಿಯನ್ನು ಕಳುಹಿಸಿ ಕಲ್ಯಾಣ ಕೋಟೆಯನ್ನು ನಿಜಾಮನಿಂದ ವಶಪಡಿಸಿಕೊಳ್ಳುತ್ತಾನೆ. ನಿಜಾಂಶಹನ ರಕ್ಷಣೆಗೆ ಬಂದಿದ್ದ ಬೀದರಿನ ಬರಿದ ಸಹನ ಸೇನಾನಿಯಾದ ಜಹಂಗೀರ್ ಖಾನನನ್ನು ಶಿರಚ್ಛೇದನವನ್ನು ರಾಮರಾಯ ಮಾಡಿಸುತ್ತಾನೆ. ನಿಜಾಂಶಹ ಎಷ್ಟೇ ಕೇಳಿಕೊಂಡರು ರಾಮರಾಯರು ಅವನ ಶಿರಚ್ಚೇಧವನ್ನು ಮಾಡಿಸುವುದರ ಮೂಲಕ ಯುದ್ಧಕ್ಕೆ ನಾಂದಿಯಾಡುತ್ತಾನೆ. ನಿಜಾಂಶಹ ತನ್ನ ರಕ್ಷಣೆಗೆ ಬಂದ ವ್ಯಕ್ತಿಯನ್ನು ಕಾಪಾಡಲಾರದ ಅಸಹಾಯಕತೆ ಮುಂದಿನ ಯುದ್ಧಕ್ಕೆ ದಾರಿಯಾಗುತ್ತದೆ. ನಿಜಾಂಶಹನು ಮೂರುಜನ ಸುಲ್ತಾನರನ್ನು ಒಗ್ಗೂಡಿಸಿ ವಿಜಯನಗರ ಸಾಮ್ರಾಜ್ಯದ ಮೇಲೆ ಯುದ್ಧಕ್ಕೆ ಸಿದ್ಧನಾಗುತ್ತಾನೆ. ನಿಜಾಂಶಹÀನ ಹೆಂಡತಿ ಬೇಗಮ್‌ಳ ವಿದಾಯದಂತೆ ತಮ್ಮ ನಾಲ್ಕು ಜನ ಹೆಣ್ಣುಮಕ್ಕಳಲ್ಲಿ ಸುಲ್ತಾನರಾದ ಆದಿಲ್ಶಾಹಿನಿಗೆ ರಾಮದಾಸ್ ಬೀಬಿಯನ್ನು ಕೊಟ್ಟು ಮದುವೆ ಮಾಡುತ್ತಾರೆ. ಕುತುಬನಿಗೆ ಬೀಬಿಯನ್ನು ಕೊಟ್ಟು ಮದುವೆ ಮಾಡಿ, ನಾಲ್ಕು ಜನ ಸುಲ್ತಾನರನ್ನು ಒಂದಾಗಿಸಿ ಯುದ್ಧಕ್ಕೆ ಹೋಗುತ್ತಾರೆ. ರಕ್ಕಸತಂಗಡಿಯಲ್ಲಿ ಯುದ್ಧವು ಸುಲ್ತಾನರ ಪರವಾಗುತ್ತದೆ. ರಾಮರಾಯನನ್ನು ಬಂಧಿಸುತ್ತಾರೆ. ಈಗ ಜಹಾಂಗೀರನ ಸ್ಥಾನದಲ್ಲಿ ರಾಮರಾಯ ಇದ್ದಾನೆ. ರಾಮರಾಯನು ಈ ಹಿಂದೆ ನಿಜಾಂಶಹನನ್ನು ಎರಡು ಸಲ ಕೈದಿಯಾಗಿ ಮಾಡಿ ಬಿಡುಗಡೆ ಮಾಡಿರುತ್ತಾನೆ. ಇದು ನಿಜಾಮ್ ಶಾಹನಿಗು ಗೊತ್ತಿದೆ. ರಾಮರಾಯ ಹೇಳುತ್ತಾನೆ ತಮ್ಮನ್ನು ಎರಡು ಸಲ ಕೈದಿಯಾಗಿದ್ದರು ರಾಜ ಸಮಾನಗಳೊಂದಿಗೆ ತಮ್ಮ ರಾಜಧಾನಿಗೆ ಮರಳಿಸಿದ್ದೇವು, ಈಗ ತಾವು ಅದೇ ಸಮಾನ ತೋರಿಸುತ್ತೀರಿ ಎಂಬ ಬಗ್ಗೆ ನನಗೇನೂ ಸಂದೇಹ ಇಲ್ಲ.


ಗೆಲುವು ಸಾಧಿಸಿದ ನಿಜಾಂಶಾಹನಿಗೆ ಆನಂದವು ಇಲ್ಲ. ರಾಮರಾಯನನ್ನು ಬಂಧಿಸಿದ ಸಂದರ್ಭದಲ್ಲಿ ರಾಮರಾಯನಿಗೆ ನಿಜಾಮ್ ಶಾಹ ಹೇಳುತ್ತಾನೆ "ತಮಗೊಂದು ಗುಟ್ಟು ಹಕೀಮಾ ಕಾಸಿಮ ಅವರು ನನ್ನ ಜೊತೆಗೆ ಇರುತ್ತಾರೆ ಏಕೆಂದರೆ ನಾನು ಸಾಯುತ್ತಿದ್ದೇನೆ. ನನ್ನ ಒಳಗಡೆ ಒಂದು ಉಣ್ಣು ಬೆಳಿತಾ ಇದೆ. ನಾನು ಇನ್ನೊಂದು ವಾರದಲ್ಲಿ ಸಾಯುತ್ತೇನೆ, ಇನ್ನೊಂದು ತಿಂಗಳಲ್ಲಿ ಬದುಕಿರುತ್ತೇನೋ ನನಗೆ ಗೊತ್ತಿಲ’’್ಲ (ರಕ್ಕಸತಂಗಡಿ ನಾಟಕ, ಪುಟ ಸಂಖ್ಯೆ, ೮೭) ತಾನು ಸಾವಿನ ಅಂಚಿನಲ್ಲಿ ಇದ್ದರೂ ರಾಮರಾಯನ ಸಾವನ್ನು ಅಪೇಕ್ಷಿಸುತ್ತಾನೆ. ಅದಕ್ಕೆ ಕಾರಣವೂ ಇತ್ತು ರಾಮರಾಯ ಕಲ್ಯಾಣದಲ್ಲಿ ಜಹಾಂಗೀರಖಾನನ್ನು ಕ್ಷಮಿಸಿ ಬಿಟ್ಟಿದ್ದರೆ ಬಹುಶಃ ಯುದ್ಧವು ಆಗುತ್ತಿರಲಿಲ್ಲವೇನೋ ಎಂಬoತೆ ಭಾಸವಾಗುತ್ತದೆ.


ಈ ನಾಟಕದಲ್ಲಿ ‘ಕಲ್ಯಾಣ’ ಕೇಂದ್ರವಾಗಿದೆ. ರಾಮರಾಯನಿಗೆ ತಮ್ಮ ಕುಲದ ಬಗ್ಗೆ ಮೋಹವಿದೆ. ರಾಮರಾಯನು ಹೇಳುವ ಪ್ರತಿಯೊಂದು ಮಾತುಗಳಲ್ಲಿ ಇದು ಕಾಣಿಸುತ್ತದೆ. ಆದಿಲ್ ಶಾಹನಿಗೆ ಹೇಳುತ್ತಾನೆ ಕಲ್ಯಾಣ ಕಲ್ಯಾಣ ನಮ್ಮ ಚಾಲುಕ್ಯವಂಶದ ಮೂಲಸ್ಥಾನ ಕುಮಾರ. ಕಲ್ಯಾಣ ಕೋಟೆಯನ್ನು ನಿಜಾಂಶಾಹನು ವಶಪಡಿಸಿಕೊಂಡಾಗ, ತಾನೆ ಕೈಯಿಂದ ಕೀಲಿಕೈ ತೆಗೆದುಕೊಳ್ಳಲು ಕಲ್ಯಾಣಕ್ಕೆ ಬರುತ್ತಾನೆ. ರಾಮರಾಯ ಕೀಲಿಕೈಯನ್ನು ಪಡೆದುಕೊಂಡಾಗ ಹೇಳುತ್ತಾನೆ, ‘ಕಲ್ಯಾಣ ಕಲ್ಯಾಣ ಚಾಲುಕ್ಯವಂಶದ ಮೂಲಸ್ಥಾನ, ನನ್ನ ರಕ್ತದ ಉಗಮಸ್ಥಾನ ಇದನ್ನು ನನ್ನ ಹಣೆ ಕೈಗೆತ್ತಿಕೊಂಡು ನಾನು ಇಂದು ಧನ್ಯನಾದೆ’ ಅನ್ನುವಂತಹ ಮಾತುಗಳು ಅವನ ಕಲ್ಯಾಣದ ಮೇಲಿರುವ ಮೋಹ ಎಂಥದ್ದು ಎಂಬುದು ಗೊತ್ತಾಗುತ್ತದೆ.


ರಕ್ಕಸತಂಗಡಿಯ ಯುದ್ಧದ ಸಂದರ್ಭದಲ್ಲಿ ರಾಮರಾಯ ಸತ್ಯಭಾಮಳಿಗೆ ಹೇಳುತ್ತಾನೆ, “ನಾಲ್ಕು ಸುಲ್ತಾನರು ಒಟ್ಟಾಗಿ ಇರೋದು ಇದೊಂದು ಶಕುನವು ಹೌದು, ಒಳ್ಳೆಯ ಶಕುನ ಹೊಸಯುಗ ಮೂಡುತಿದೆ ನೋಡುತ್ತಿರಿ ಚಾಲುಕ್ಯ ಯುಗ” (ಪುಟಸಂಖ್ಯೆ ೬೭). ಬಹುಶಃ ಯುದ್ಧದಲ್ಲಿ ರಾಮರಾಯ ಗೆದ್ದಿದ್ದರೆ ಗೆಲುವು ವಿಜಯನಗರದ್ದು ಆಗುತ್ತಿರಲಿಲ್ಲವೇನೋ ಅದು ರಾಮರಾಯನ ವಂಶದ ಕುಲದ ಗೆಲುವು, ಕಲ್ಯಾಣದ ಗೆಲುವು ಆಗುತ್ತಿತು.್ತ ರಾಮರಾಯನಿಗೆ ಕೃಷ್ಣದೇವರಾಯನ ತುಳುವ ವಂಶದ ಬಗ್ಗೆ ಕೋಪವಿದೆ. ಅದು ಸತ್ಯಭಾಮಳ ಗೊತ್ತಾಗುತ್ತದೆ. ೪೫ ವರ್ಷದ ಅವಮಾನ ಪ್ರತಿಕ್ಷಣ ಚುಚ್ಚುತಿದೆ. ಸಿಂಹಾಸನದ ಮೇಲೆ ತುಳುವ, ನಾನು ಅರವೀಡು ಬಂಟ. ಸಂಬಳಕ್ಕೆ ತಂದ ಹಾಗೆ ತಂದ ಅಳಿಯ ನಾನು. ವೆಂಕಟಾದ್ರಿ ತಿರುಮಲ ಚಾಣಾಕ್ಷತೆಯಿಂದ ಮಗಳನ್ನು ಕೊಟ್ಟು ನಮ್ಮನ್ನು ಅಂಗರಕ್ಷಕನನ್ನಾಗಿ ಮಾಡಿಕೊಂಡ. ಅವರ ರಕ್ಷಣೆಗೆ ನಾವು ಎಂಥ ಚಾಣಾಕ್ಷತೆ. ಎಂಥ ಕುಟಿಲತೆ. (ಪುಟ ಸಂಖ್ಯೆ ೬೭)


ರಾಮರಾಯ ರಾಜಕೀಯ ಮುತ್ಸದ್ದಿ, ಚಾಣಾಕ್ಷ, ಪರಾಕ್ರಮಿ ಅಂತೆಯೇ ಮಾನವೀಯ ಅಂಶಗಳನ್ನು ಒಳಗೊಂಡಿರುವ ವ್ಯಕ್ತಿಯಾಗಿಯೂ ಕಂಡುಬರುತ್ತಾನೆ. ಆದಿಲ್ ಶಾಹನನ್ನು ಮಗನಂತೆ ಕಂಡದ್ದು ‘ಕುಮಾರ’ ಎಂದು ಕರೆಯುತ್ತಾನೆ. ಆದಿಲ್ ಶಾಹನಿಗೆ ಹೇಳುತ್ತಾನೆ ಇನ್ನು ಮುಂದೆ ನಾವು ಒಂದಾಗಲಿಕ್ಕೆ ಅಡತಡೆಯಿಲ್ಲ. ಒಂದು ಗೂಡಲಿಕ್ಕೆ ಆಹ್ವಾನ ಎಂದು ಹೇಳುತ್ತಾನೆ. ನಾಲ್ಕುಜನ ಸುಲ್ತಾನರು ಯುದ್ಧಕ್ಕೆ ಸನ್ನದ್ಧವಾಗಬೇಕಾದಾಗ ಬರೀದ್ ಶಾಹನಿಗೆ ಕುತುಬ್ ಶಾಹ ಹೇಳುತ್ತಾನೆ, ನನ್ನ ಅಣ್ಣನೇ ನನ್ನನ್ನು ಕೊಲ್ಲುತ್ತಿದ್ದ ರಾಮರಾಯ ನನಗೆ ರಕ್ಷಣೆ ನೀಡದಿದ್ದರೆ. ಯುದ್ಧ ಕೈದಿಯಾಗಿದ್ದಾಗ ರಾಮರಾಯನ ಹತ್ತಿರ ಸುಲ್ತಾನ ನಿಜಾಂಶಹ ತನ್ನ ಹೊಟ್ಟೆಯ ಒಳಗಡೆ ಹುಣ್ಣು ಬೆಳೆಯುತ್ತಿದೆ, ಸಾಯುತ್ತಿದ್ದೇನೆ ಎಂದು ರಾಮರಾಯನ ಹತ್ತಿರ ಹೇಳುತ್ತಾನೆ. “ಸುಲ್ತಾನ ನಿಜಾಂಶಹ ಇನ್ನೊಂದು ಸಂದರ್ಭದಲ್ಲಿ ಆಗಿದ್ದರೆ, ನಾನು ತಮಗೆ ಆಮಂತ್ರಣ ಕೊಡುತ್ತಿದ್ದೆ ವಿಜಯನಗರಕ್ಕೆ ಬರಲಿಕ್ಕೆ, ಅಲ್ಲಿ ನಮ್ಮ ಆಸ್ಥಾನದಲ್ಲಿ ಜಗತ್ತಿನ ಅತಿ ನಿಷ್ಣಾತ ವೈದ್ಯರಿದ್ದಾರೆ. ಹಕೀಮರಿದ್ದಾರೆ ಈಗ ಕೂಡ, ಯುದ್ಧ ಮುಗಿದ ಬಳಿಕ ತಾವು ಅಲ್ಲಿಗೆ ಬರಬಹುದು ಶುಶ್ರೂಷೆಗೆ”. (ಪುಟ ಸಂಖ್ಯೆ ೮೭) ಸಾವಿನ ಅಂಚಿನಲ್ಲಿ ಇದ್ದರೂ ಮಾನವೀಯತೆಯಿಂದ ರಾಮರಾಯ ಮಮತೆ ತೋರುವ ವ್ಯಕ್ತಿಯಾಗಿ ನಾಟಕದಲ್ಲಿ ಕಂಡುಬರುತ್ತಾನೆ.


ಕೃಷ್ಣ ನದಿಯಲ್ಲಿ ರಕ್ತ ಹರಿದು ಯುದ್ಧವು ಮುಗಿದಿದೆ, ವೆಂಕಟಾದ್ರಿಯನ್ನು ಯುದ್ಧದಲ್ಲಿ ಕಾಣದೆ ತಿರುಮಲ ಗಾಯಗೊಂಡು ಅರಮನೆಗೆ ಬಂದು ರಾಣಿ ಹತ್ತಿರ ರಕ್ಕಸತಂಗಡಿಯಲ್ಲಿ ಮಹಾಭಯಂಕರ ರಕ್ತಪಾತದÀ ಪ್ರಳಯದಂತ ಯುದ್ಧದಲ್ಲಿ ರಾಮಾಣ್ಣ ಕಾಣಲಿಲ್ಲ. ರಾಣಿ -ಸತ್ಯಭಾಮ “ಯಜಮಾನರು ಕ್ಷೇಮವಾಗಿದ್ದಾರೆಯೇ, ತಿರುಮಲ- ನಾವೆಲ್ಲ ಅನಾಥರಾಗಿದ್ದೇವೆ. ತಾಯಿ ಈ ಸುದ್ದಿ ತರೋ ದೌರ್ಭಾಗ್ಯ ನನ್ನ ಪಾಲಿಗೆ ಯಾಕೆ ಬರಬೇಕು”. (ಪುಟ ಸಂಖ್ಯೆ ೧೧) ಹೊರಡಿ ನಾವು ಪೆನಕೊಂಡಗೆ ಹೋಗಬೇಕು ಎಂದು ಹೇಳುತ್ತಾನೆ.


ಅರಮನೆಯಲ್ಲಿರುವ ಎಲ್ಲಾ ಸಂಪತ್ತನ್ನು ಖಾಲಿ ಮಾಡುತ್ತಿರುವ ಸಂದರ್ಭದಲ್ಲಿ ಸದಾಶಿವನಿಗೆ ನರಸಿಂಹ ಇಲ್ಲಿದ್ದೇನು ಮಾಡುತ್ತೀರಾ ಹೊರಡು, ತಿರುಮಲ ರಾಯರು ಹೇಳಿದ್ದಾರೆ, ನಾನು ಹಂಪಿ ಬಿಟ್ಟು ಬರೋದಿಲ್ಲ, ನಾನು ಇಲ್ಲಿನ ರಾಜ, ನನಗೆ ಯಾರು ಹೆಳುತ್ತಾರೆ. ನರಸಿಂಹ “ಏ ಬಾಯಿ ಮುಚ್ಕೊ ಮೂರ್ಖ ನಿನ್ನನ್ನು ಇಲ್ಲೇ ಮುಗಿಸಿ, ಕೊಂದುಹಾಕಿದರು ಯಾರು ಮರುಪ್ರಶ್ನೆ ಕೇಳುವುದಿಲ್ಲ, ಆದರೆ ನೀನು ನಮಗೆ ಪೆನುಗೊಂಡೆಯಲ್ಲಿ ಬೇಕು. ಸಿಂಹಾಸನದ ಮೇಲೆ ಕುಂಡೆ ಊರಲಿಕ್ಕೆ” (ಪುಟ ಸಂಖ್ಯೆ೧೫) ಇವನನ್ನು ಕಟ್ಟಿಹಾಕಿ ಎತ್ತಿಕೊಂಡು ಹೋಗಿರಿ ಆದರೆ ಅವನಿಗೇನು ಆಗಬಾರದು ತಿಳಿತೇನು, ಅರಮನೆಯ ಒಡವೆಗಳ ಜೊತೆಗೆ ಇನ್ನೊಂದು ಒಡವೆ ಇದು.”(ಪುಟ ಸಂಖ್ಯೆ ೧೫) ದೂತ ಬಂದು ನರಸಿಂಹನಿಗೆ “ರಾಜ ಮಾತೆಯವರು ಪ್ರಾಣ ಬಿಟ್ಟರು ಎಂದಾಗ ಒಂದು ಗಂಟು ಕಡಿಮೆ ಆಯ್ತು ಪೆನುಕೊಂಡಗೆ ಹೊರಲಿಕ್ಕೆ. ದೂತ ಮತ್ತೆ ರಾಣಿ ಸತ್ಯಭಾಮರೂ ಅವರ ಪಕ್ಕದಲ್ಲೇ ಪ್ರಾಣ ನೀಡಿದ್ದಾರೆ ನರಸಿಂಹ ಎರಡನೆಯ ಮೂಟೆ! ಪ್ರಾರಬ್ದ ಮಾಹುತರೆಲ್ಲಿ! ಕೈಗೆ ಸಿಕ್ಕ ಆನೆಗಳನ್ನೆಲ್ಲಾ ಹೊರಡಿಸಿರಿ ಅರಮನೆಯಲ್ಲಿ ಒಂದು ಹೆಳಲ ಬಂಗಾರ, ಒಂದು ಮುತ್ತಿನ ದಂಡೆ ಉಳಿಯೋ ಕೂಡದು, ಮೂಲೆ ಮೂಲೆ ಗುಡಿಸಿರಿ” (ಪುಟ ಸಂಖ್ಯೆ ೧೬,) ಎನ್ನುವ ಮಾತಿನಲ್ಲಿ ಸಂಬAಧ ಸಂಸ್ಕೃತಿಯು ಸಂಪತ್ತಿನ ಮುಂದೆ ಯಾವುದೂ ಇಲ್ಲವೇನೋ ಎಂಬAತೆ ನರಸಿಂಹನ ಮಾತುಗಳಲ್ಲಿ ಅನಿಸುತ್ತದೆ.


ಸಮಕಾಲೀನತೆಯ ಸಂದರ್ಭದಲ್ಲಿ ಯುದ್ಧದ ಭೀಕರತೆಯಿಂದ ಆಗುವ ಪರಿಣಾಮಗಳು ಎಂತಹುದು ಎಂಬುದು ರಕ್ಕಸತಂಗಡಿ ಯುದ್ಧವು ಸಾಕ್ಷಿ ಕಾರ್ನಾಡರು ರಾಕ್ಷಸತಂಗಡಿ ನಾಟಕದಲ್ಲಿ ಹಿಂದೂ-ಮುಸ್ಲಿA ಸೂಕ್ಷ್ಮಗಳನ್ನು ಕಾಣಿಸಲು ಪ್ರಯತ್ನಿಸಿದ್ದಾರೆ ಹಿಂದೂ-ಮುಸ್ಲಿA ಮತ್ತು ಧರ್ಮದ ಶ್ರೇಷ್ಟತೆಯ ಅಫೀಮು ಇಂದು ಕೋಮುಗಲಭೆಗೆ ಕಾರಣವಾಗಿದೆ. ತಲೆದಂಡ, ಟಿಪ್ಪು ಸುಲ್ತಾನ ಕಂಡ ಕನಸು, ನಾಟಕಗಳಿಗೆ ಹೋಲಿಸಿದರೆ ರಾಕ್ಷಸ ತಂಗಡಿ ನಾಟಕದಲ್ಲಿ ಪಾತ್ರಗಳ ಜೊತೆಗೆ ಕತೆಗೂ ಪ್ರಾಧ್ಯಾನತೆ ನೀಡಿದಂತೆ ಕಾಣುತ್ತಿದೆ.


ಗ್ರಂಥಋಣ

ಆಕರ ಗ್ರಂಥ:

೧ ಗಿರೀಶ್ ಕಾರ್ನಾಡ: ರಾಕ್ಷಸತಂಗಡಿ: ಮನೋಹರ ಗ್ರಂಥಮಾಲೆ, ಧಾರವಾಡ ೨೦೧೮



ಪರಾಮರ್ಶನ ಗ್ರಂಥಗಳು


೧ ಗಿರಡ್ಡಿ ಗೋವಿಂದರಾಜು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ೧೯೮೧


೨ ಗಿರಡ್ಡಿ ಗೋವಿಂದರಾಜು, ಸಮಗ್ರ ವಿಮರ್ಶೆ, ಸ್ವಪ್ನ ಬುಕ್ ಹೌಸ್, ಬೆಂಗಳೂರು ೨೦೧


೩ ಚಂದ್ರಶೇಖರ ಎಸ್, ಸಾಹಿತ್ಯ ಮತ್ತು ಚರಿತ್ರೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೧೯೯೯


೪ ನಾಗರಾಟ ಡಿ. ಆರ್., ಸಂಸ್ಕೃತಿ ಚಿಂತನೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೧೯೯೯


೫ ನಾಯಕ ಜಿ. ಹೆಚ್., ಶತಮಾನದ ಕನ್ನಡ ಸಾಹಿತ್ಯ, ರಾಘವೇಂದ್ರ ಪ್ರಕಾಶನ, ಅಂಕೋಲ ೨೦೦೦

Comments


bottom of page