ಮಂಜುನಾಥಯ್ಯ ನಾಗರಾಜಯ್ಯ, (ಮಂಜುನಾಥಯ್ಯ ದೇವರು ಕರೇವಾಡಿಮಠ)
ಸಂಶೋಧನಾ ವಿದ್ಯಾರ್ಥಿ, ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ.
ಭಾರತದ ಐತಿಹಾಸಿಕ ಪರಂಪರೆಯಲ್ಲಿ ‘ಮಠ’ ಪರಂಪರೆಯು ತನ್ನದೇ ಆದ ವೈಶಿಷ್ಟತೆಯನ್ನು ಪಡೆದುಕೊಂಡಿದೆ. ಸಹಸ್ರಾರು ವರ್ಷಗಳಿಂದ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ನರಳುವ ಮನುಕುಲದ ಉದ್ಧಾರಕ್ಕಾಗಿ ಹಲವಾರು ಮಹನಿಯರು ಹಾಗೂ ಸಂಘ ಸಂಸ್ಥೆಗಳು ವ್ಯಷ್ಟಿ ಮತ್ತು ಸಮಷ್ಟಿ ಪ್ರಜ್ಞೆಯನ್ನು ಮೂಡಿಸುತ್ತ ಬಂದಿವೆ. ಅವುಗಳಲ್ಲಿ ಅತ್ಯಂತ ಪ್ರಮುಖ ಸ್ಥಾನದಲ್ಲಿ ನಿಂತು ವ್ಯಕ್ತಿಯು ಸರ್ವಕ್ಷೇತ್ರಗಳಲ್ಲಿ ಸಾಧಕನಾಗಲು ಪ್ರೇರೆಪಿಸುವ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಾರ್ಗದ ನೆಲೆಯ ಸೆಲೆಯಾಗಿಸುವುದೇ ಮಠ. ಇಂತಹ ‘ಮಠ’ದ ಅರ್ಥ ಸ್ವರೂಪ ಮತ್ತು ಐತಿಹಾಸಿಕತೆಯನ್ನು ತಿಳಿಯುವ ಅಗತ್ಯವಿದ್ದು ಅದನ್ನು ಕಂಡುಕೊಳ್ಳುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.
ಮಠದ ಅರ್ಥ, ಸ್ವರೂಪ ಮತ್ತು ಐತಿಹಾಸಿಕತೆ:
ಮಠ ಇದು ಸಂಸ್ಕೃತ ಜನ್ಯಪದ. ಅಮರ ಸಿಂಹನು ತನ್ನ ಅಮರಕೋಶದಲ್ಲಿ ‘ಮಠಶ್ಚಾತ್ರಾದಿ ನಿಲಯೋ ಎಂಬುದಾಗಿ ಅರ್ಥೈಸಿದ್ದಾನೆ. ಇದರ ಅರ್ಥ ಸನ್ಯಾಸಿಗಳುವಿದ್ಯಾರ್ಥಿಗಳು ವಾಸಿಸುವ ಸ್ಥಳವೆಂಬುದು ಆತನ ಅಭಿಪ್ರಾಯ.’ ಇದೇ ಅಭಿಪ್ರಾಯವನ್ನು ಅಕ್ಕೂರ್‌ಮಠರವರು ತಮ್ಮ ಮಠಗಳ ಪರಿಕಲ್ಪನೆ ಎಂಬ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಅವರು “ಮೊದಲು ‘ಮಠ’ ಶಬ್ದ ಮಂದಿರ, ದೇವಾಲಯಗಳ ಅರ್ಥದಲ್ಲಿ ಬಳಕೆಗೊಂಡಿದ್ದು ನಂತರ “ಮಠಾಯತನಮ್” ದಿಂದ ಸನ್ಯಾಸಿಗಳ ವಾಸಸ್ಥಳ, ವಿದ್ಯಾಲಯ ಎಂಬ ಅರ್ಥದಲ್ಲಿ ಬಳಕೆಗೆ ಬಂದಿತು ಎಂದಿದ್ದಾರೆ. ಅಲ್ಲದೇ ಮಠಗಳನ್ನು ಆಂಗ್ಲ ಭಾಷೆಯಲ್ಲಿ ಮಾನೇಷ್ಟರಿಸ್ (ಒoಟಿsಣeಡಿies) ಎಂದು ಕರೆಯುತ್ತಾರೆ. ಇದು ಗ್ರೀಕ್ ಮೂಲ ಶಬ್ದವಾಗಿದ್ದು ಇದರ ಅರ್ಥ ಏಕಾಂತತೆ ಎಂದಾಗುತ್ತದೆ ಅಂದರೆ ಇದು ಸನ್ಯಾಸಿಯು ಏಕಾಂತೆತೆಯಿAದ ಪಾರಮಾರ್ಥಿಕ ಜ್ಞಾನವನ್ನು ಸ್ವಗತ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಸೂಚಿಸುತ್ತದೆ.
ಇನ್ನು “ಪಾಶ್ಚಿಮಾತ್ಯ ವಿದ್ವಾಂಸ ಮೇಕ್ ಡೋನಾಲ್ಡ್ ತನ್ನ ಸಂಸ್ಕೃತ ಕೋಶದಲ್ಲಿ ಮಠದ ಪರಿಭಾಷೆಯನ್ನು ಹೇಳುವಾಗ ಭೈರಾಗಿ ಅಥವಾ ವಿದ್ಯಾರ್ಥಿಗಳ ವಾಸಸ್ಥಾನ, ಧಾರ್ಮಿಕ ವಿಷಯಗಳ ಅಧ್ಯಯನ ಕೇಂದ್ರ ಅಥವಾ ಗುರುಕುಲವೆಂದು ತಿಳಿಸುತ್ತಾರೆ.”(ಪಂಚಾಮೃತ ಪು.೧೯೨), ಆಂಗ್ಲಭಾಷೆಯ ವಿಕಿಪಿಡಿಯಾವು ‘ಮಠ’ ಶಬ್ದ ಕುರಿತಂತೆ ‘mಚಿಣhಚಿ ಡಿeಜಿeಡಿs ಣo ಛಿಟosisಣeಡಿ, iಟಿsಣiಣuಣe oಡಿ ಛಿoಟಟಚಿge’ ಎಂದು ಹೇಳಿದೆ. ವಿದ್ವಾಂಸರಾದ ಡಾ. ಪಿ.ವಿ. ಕಾಣೆ, ಸರ್ ಮೋನಿಯರ್ ವಿಲಿಯಮ್ಸ್ರವರು ‘ಸಹ ಸನ್ಯಾಸಿಗಳ ಕುಟೀರ, ಮಹಾವಿದ್ಯಾಲಯ’ ಎಂದು ಹೇಳಿದ್ದಾರೆ. ಇದೆಲ್ಲವನ್ನು ಗಮನಿಸಿದಾಗ ಹಲವಾರು ವಿದ್ವಾಂಸರು ಅಭಿಪ್ರಾಯದಲ್ಲಿ ಮತ್ತು ನಿಘಂಟುಗಳಲ್ಲಿ ‘ಮಠ’ ಶಬ್ದವನ್ನು ಕುರಿತಂತೆ ಮಠ ಎಂದರೆ ‘ಸನ್ಯಾಸಿಗಳ ವಾಸಸ್ಥಾನ, ಸನ್ಯಾಸಿ ಮತ್ತು ವಿದ್ಯಾರ್ಥಿಗಳ ವಾಸಸ್ಥಾನ, ಗುರುಗಳು ವಾಸಿಸುವ ಸ್ಥಳ, ವಿದ್ಯಾಲಯ, ವಿಹಾರ, ಶಾಲೆ, ಕಾಲೇಜು, ಪಾಠಶಾಲೆ, ಜ್ಞಾನಪೀಠ, ಮಹಾವಿದ್ಯಾಲಯ ಇತ್ಯಾದಿ ಅರ್ಥಗಳಿಂದ ಅರ್ಥೈಸಲ್ಪಟ್ಟಿದೆ’. ಆದರೆ ಪ್ರಸ್ತುತ ಇವು ಮಠದ ಸ್ವರೂಪವನ್ನು ಸಮಗ್ರವಾಗಿ ಅರ್ಥೈಸಲಾರವು ಎನಿಸುತ್ತದೆ. ಆದ್ದರಿಂದಲೇ ಸಮಾಜ ಶಾಸ್ತçಜ್ಞರಾದ ಘುರಿಯಾರವರು ಒಂದು ಹೆಜ್ಜೆ ಮುಂದೆ ಹೋಗಿ ಮಠವನ್ನು ಕುರಿತಂತೆ “ವ್ಯಕ್ತಿ ಸಾಂಸಾರಿಕ ಜೀವನವನ್ನು ತ್ಯಜಿಸಿ ಸನ್ಯಾಸಿಯಾದಾಗ ಅವನಿಗೆ ವಾಸಸ್ಥಾನ ಅವಶ್ಯವಾಗಿ ಬೇಕಾಗುತ್ತದೆ. ಆಗ ಅದು ಮಠದ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಸನ್ಯಾಸ ಜೀವನವನ್ನು ನಿಯಮಗಳನ್ನು (ನಿರ್ವಹಿಸಲು) ಪಾಲಿಸಲು ಒಂದು ಸಂಘಟನಾತ್ಮಕವಾದ ವ್ಯವಸ್ಥೆ ಬೇಕಾಗುತ್ತದೆ. ಇದನ್ನೆ ಮಠವೆಂದು ಕರೆಯುತ್ತಾರೆ.” (ಅದೇ. ಪು.೧೯೦) ಎಂದಿದ್ದಾರೆ. ಇವರ ಈ ಹೇಳಿಕೆಯನ್ನು ಭಾಗಶಃ ಒಪ್ಪಬಹುದು. ಕಾರಣ ಇದು ಆಧುನಿಕ ಪ್ರಚಲಿತ ಮಠದ ಸ್ವರೂಪಕ್ಕೆ ಹತ್ತಿರವಾದ ಹೇಳಿಕೆಯಾಗಿದೆ. ಆದರೆ ಒಟ್ಟಾರೆ ಸ್ವರೂಪವನ್ನು ಇದು ಹೇಳುವುದಿಲ್ಲ.
ಮಠದ ಸ್ವರೂಪ ಮೂಲದಲ್ಲಿ ಹೇಗಿತ್ತು ಎಂದು ಅರಿಯಬೇಕಾದರೆ ಮೊದಲು ‘ಮಠ’ ಶಬ್ದದ ಬಳಕೆಯ ಇತಿಹಾಸವೇನು ಎಂದು ತಿಳಿಯುವ ಅಗತ್ಯವಿದೆ. ಆಗ ಮಾತ್ರ ನಮಗೆ ಮೂಲ ಮಠದ ಪರಿಕಲ್ಪನೆ ಗೋಚರಿಸುತ್ತದೆ ಮತ್ತು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ‘ಮಠಗಳ ಪರಿಕಲ್ಪನೆ’ ಎಂಬ ಲೇಖನದಲ್ಲಿ ಅಕ್ಕೂರುಮಠರವರು ಹಿಂದೂ ಮಠಗಳ ಐತಿಹಾಸಿಕ ಹಿನ್ನಲೆಯನ್ನು ತಿಳಿಸುವ ದಾಖಲೆಯೊಂದನ್ನು ಹೀಗೆ ತಿಳಿಸಿದ್ದಾರೆ. “ಭಾರತದಲ್ಲಿ ಅಧ್ಯಯನ ನಡೆಸಿದ (ಊiಟಿಜu ಡಿeಟigious ಇಟಿಜoತಿmeಟಿಣ ಅommissioಟಿ) ವರದಿಯಲ್ಲಿ ಮಠಗಳಿಗೆ ಸಂಬAಧಿಸಿದ ಉಪಯುಕ್ತ ವರದಿಗಳಿವೆ. ಶ್ರೀಶಂಕರಾಚಾರ್ಯರು ಮೊಟ್ಟಮೊದಲು ಮಠಸ್ಥಾಪಿಸಿದರು. ಹಿಂದೂ ಮಠಗಳು ಹುಟ್ಟಲು ಭೌದ್ಧ ವಿಹಾರಗಳು ಪ್ರೇರಣೆ ನೀಡಿವೆ ಎನ್ನುವ ಐತಿಹಾಸಿಕ ಸಂಗತಿಯನ್ನು ವರದಿ ತಿಳಿಸುತ್ತದೆ. ಶಂಕರಾಚಾರ್ಯರ ನಂತರ ರಾಮಾನುಜ, ಮಧ್ವ ಮತ್ತು ಶೈವ, ವೀರಶೈವ ಇತ್ಯಾದಿ ಬೇರೆ ಬೇರೆ ಮಠಗಳು ನಿರ್ಮಾಣಗೊಂಡವು ಎನ್ನುವ ವಿಚಾರವು ವರದಿಯಲ್ಲಿ ಉಕ್ತವಾಗಿದೆ. ವೀರಶೈವವು ಇದೆ ಹಾದಿಯಲ್ಲಿ ಸಾಗಿ ಮಠಗಳ ಸಂಖ್ಯೆ ಹೆಚ್ಚಿತೆಂದು ವರದಿ ಸ್ಪಷ್ಟಪಡಿಸುತ್ತದೆ.”(ಅದೇ. ಪು.೧೯೫) ಎಂದಿದ್ದಾರೆ. ಡಾ. ಶ್ರೀನಿವಾಸರಾವ್ ಅವರು ತಮ್ಮ ಸಂಶೋಧನ ಮಹಾಪ್ರಬಂಧದಲ್ಲಿ ಇದೇ ಅಭಿಪ್ರಾವನ್ನು ವ್ಯಕ್ತಪಡಿಸಿದ್ದಾರೆ. ಮಠದ ಇತಿಹಾಸವನ್ನು ಕುರಿತಂತೆ ಅವರ ಹೇಳಿಕೆ ಹೀಗಿದೆ. “ಭಾರತದಲ್ಲಿ ಮಠಗಳ ಪರಂಪರೆ ಭಗವಾನ್ ಶಂಕರರಿAದ ಆರಂಭವಾಯಿತು. ಇದಕ್ಕೆ ಪೂರ್ವದಲ್ಲಿ ಜೈನರು ಮಠ ಶಬ್ದಕ್ಕೆ ಪೂರ್ವದಲ್ಲಿ ಪರ್ಯಾಯವಾಗಿ ಬಸದಿ ಎಂಬ ಪದವನ್ನು, ಬೌದ್ಧರು ವಿಹಾರ ಎಂಬ ಪದವನ್ನು ಬಳಸಿದ್ದಾರೆ. ಸಿಕ್ಕರು ಗುರುದ್ವಾರಾ ಎನ್ನುತ್ತಾರೆ. ಉತ್ತರ ಭಾರತದಲ್ಲಿ ಮಠಕ್ಕೆ ಪರ್ಯಾಯವಾಗಿ ಆಶ್ರಮ್, ಸ್ಥಲ್, ಡೇರಾ, ಅಖಾಡ ಇತ್ಯಾದಿ ಶಬ್ದಗಳನ್ನು ಬಳಸುತ್ತಾರೆ. (ಸ. ವಿ. ಮ.ವಿ.ವಿ.ಅ, ಪು. ಘಿII) ಇಲ್ಲಿ ಶಂಕರಾಚಾರ್ಯರಿAದ ಮಠ ಆರಂಭವಾಯಿತು ಎನ್ನುವ ವಿಚಾರ ಸಮಂಜಸವಾಗಿ ತೋರುವುದಿಲ್ಲ. ಇದೇರೀತಿ ಆರಂಭದಲ್ಲಿ ಹುಬ್ಬಳ್ಳಿಯ “ಮೂರುಸಾವಿರ ಮಠದ ಸಾಂಸ್ಕೃತಿಕ ಅಧ್ಯಯನ ಎಂಬ ಮಹಾಪ್ರಬಂಧ ರಚಿಸಿದ ಸಂಶೋಧಕರು ಶಂಕರಾಚಾರ್ಯರೆ ಸ್ಥಾಪಕರೆಂದು ಭಾಗಶಃ ಒಪ್ಪಿರುವಂತೆ ಕಂಡು ಬಂದರು. ನಂತರದಲ್ಲಿ ಅವರು ಕ್ರಿಸ್ತಪೂರ್ವದಲ್ಲೆ ಮಠಗಳ ಅಸ್ಥಿತ್ವ ಇದ್ದವು ಎಂಬ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಆದರೆ ನಿರ್ದಿಷ್ಟವಾಗಿ ಅವುಗಳನ್ನು ಸಂಶೋಧನೆಗೆ ಒಳಪಡಿಸುವ ಗೋಜಿಗೆ ಅವರು ಹೋಗದೆ ಹಿಂದೆ ಸರಿದಂತೆ ಕಾಣುತ್ತಾರೆ. ಶಂಕರಾಚಾರ್ಯರ ಕಾಲಮಾನ ವಿದ್ವಾಂಸರ ಅಭಿಪ್ರಾಯದಲ್ಲಿ ೭ರಿಂದ ೮ನೇ ಶತಮಾನವಾಗಿದೆ. ಇವರಿಗಿಂತ ಪೂರ್ವದಲ್ಲಿಯೇ ವೀರಶೈವ ಪಂಚಪೀಠಗಳಿಗೆ ಸಂಬAಧಿಸಿದ ಅನೇಕ ಮಠಗಳು ಅದಾಗಲೇ ಅಸ್ಥಿತ್ವದಲ್ಲಿದ್ದವು ಎಂಬುವುದಕ್ಕೆ ಅನೇಕ ಸಾಕ್ಷಾಧಾರಗಳು ಸಿಗುತ್ತವೆ. ಕಾಶಿ ಜಂಗಮವಾಡಿಮಠ (ಕಾಶಿಪೀಠ) ದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು (ಮಲ್ಲಿಕಾರ್ಜುನ-ಜಂಗಮ-೫೧ನೇಯವರು) ಇವರಿಗೆ ಶ್ರೀ ಜಯನಂದದೇವ ರಾಜುನು ವಿಕ್ರಮನಾಮ ಸಂವತ್ಸರ ೬೩೧(ಕ್ರಿ. ಶ. ೫೭೪) ರಲ್ಲಿ ಭೂದಾನ ಮಾಡಿ ದಾನಶಾಸನ ಬರೆದುಕೊಟ್ಟಿರುವುದರಿಂದ ಶಂಕರಾಚಾರ್ಯರಿಗಿAತ ಪೂರ್ವದಲ್ಲೇ ಜಂಗಮವಾಡಿಮಠವು ಕಾಶಿಯಲ್ಲಿ ಮತ್ತು ಅದಕ್ಕೂ ಪೂರ್ವದಲ್ಲೆ ನೇಪಾಳದಲ್ಲಿ ಇರುವುದು ತಿಳಿದು ಬರುತ್ತದೆ. “ಶಂಕರರಿಗೆ ರೇವಣಸಿದ್ಧರು ರತ್ನಗರ್ಭ ಗಣಪತಿ ಸಹಿತ ‘ಇಷ್ಟಲಿಂಗ’ದ ಪ್ರತೀಕವಾಗಿರಬಹುದಾದ ‘ಚಂದ್ರಮೌಳೇಶ್ವರಲಿAಗ’ವನ್ನು ದಯಪಾಲಿಸಿದ್ದಾರೆ. ಇದು ಶೃಂಗೇರಿ ಪೀಠದ ಆಚಾರ್ಯರ ಅಪ್ಪಣೆಯಂತೆ ಆಸ್ಥಾನ್ ವಿದ್ವಾನ್ ಕಾಶಿಲಕ್ಷö್ಮಣಶಾಸ್ತಿçà ರಚಿಸಿರುವ “ಗುರುವಂಶಕಾವ್ಯ” ಚರಿತ್ರೆಯಲ್ಲಿ ಉಕ್ತವಾಗಿದ್ದು ಇದನ್ನು ಪೂರ್ವದ ರೇಣುಕ ವಿಜಯ ಇತ್ಯಾದಿ ಗ್ರಂಥಗಳನ್ನು ಆಧರಿಸಿ ಅವರು ರಚಿಸಿದ್ದು, ‘ಸುಸಿದ್ಧದತ್ತಂ’ ಎಂಬ ಶ್ಲೋಕದ ವಿಚಾರದಲ್ಲಿ ಗೋಬಿಂದಾಚಾರ್ಯ ಎಂದು ಅರ್ಥೈಸುವ ತಿರುಚುವ ಕಾರ್ಯವನ್ನು ಕೆಲವರು ಮಾಡಿದ್ದನ್ನು ಗಮನಿಸಿ ಸುಸಿದ್ಧದತ್ತಂ ಎಂದರೆ ರೇಣುಕರು ಅಥವಾ ರೇವಣಸಿದ್ಧರೆಂದು ತಿಳಿಸಿದ್ದಾರೆ ಎನ್ನುವ ವಿಚಾರವು ಕಾಶಿನಾಥಶಾಸ್ತಿçÃಗಳವರ ‘ಆದಿ ರೇಣುಕಾಚಾರ್ಯ’ ಕೃತಿಯಲ್ಲಿ ನೋಡಬಹುದು. ಈ ಘಟನೆಗೂ ಪೂರ್ವದಲ್ಲೆ ರೇವಣಸಿದ್ದೇಶ್ವರರು ‘ಅಷ್ಟಾದಶಮಠ’ಗಳನ್ನು ಕೊಲ್ಲಿಪಾಕಿಯಲ್ಲಿ ನಿರ್ಮಿಸಿದ್ದರೆನ್ನುವುದಕ್ಕೆ ಈಗಲೂ ಅಲ್ಲಿ ಅಷ್ಟಾದಶಮಠಗಳನ್ನು ಇರುವುದೇ ಸಾಕ್ಷಿಗಳಾಗಿವೆ. ಆದ್ದರಿಂದ ಮೊದಲು ಮಠ ಸ್ಥಾಪಿಸಿದವರು ಶಂಕರಾಚಾರ್ಯರಲ್ಲ ಎಂಬುವುದು ಇದರಿಂದ ಸ್ಪಷ್ಟವಾಗುತ್ತದೆ. ಕ್ರಿ.ಶ. ೩ನೇ ಶತಮಾನದವನು ಆಗಿರಬಹುದಾದ ಅಮರಸಿಂಹನು ‘ಮಠ’ ಶಬ್ದ ಬಳಸಿರುವುದರಿಂದಲೂ ಶಂಕರಾಚಾರ್ಯರಿಗಿAತಲೂ ಪೂರ್ವದಲ್ಲೆ ‘ಮಠ’ ಪರಂಪರೆಯು ಇತ್ತು ಎಂಬುವುದು ಸ್ಪಷ್ಟವಾಗುತ್ತದೆ. ಅಲ್ಲದೇ ಅಮರಸಿಂಹನಿಗಿAತಲೂ ಪೂರ್ವದಲ್ಲಿ ಕ್ರಿ.ಪೂ. ೧ನೇ ಅಥವಾ ೩ನೇ ಶತಮಾನದಲ್ಲಿ ಬರುವ ಅಶ್ವಘೋಶನು ತನ್ನ ‘ಬುದ್ಧ ಚರಿತ್ರೆ’ಯಲ್ಲಿ ‘ಮಠ’ ಶಬ್ದದ ವ್ಯಾಖ್ಯಾನ ಅಥವಾ ಅದರ ಸ್ವರೂಪವನ್ನು ಈ ರೀತಿ ಸ್ಪಷ್ಟವಾಗಿ ತಿಳಿಸಿದ್ದಾನೆ.
“ಬ್ರಹ್ಮಘೋಷೋ ಭವೇತ್ ಯತ್ರ ಯತ್ರ ಬ್ರಹ್ಮಾಶ್ರಯೀ ಸ್ಥಿತಃ|
ದೇವಸ್ಯ ಪೂಜನಂ ದಾನಂ ಮಠಮಿತ್ಯಭಿದೀಯತೆ|| (ಬುದ್ಧ ಚರಿತ್ರೆ)” (ಪಂಚಾಮೃತ. ಪು.೧೯೧)
ಈ ಶ್ಲೋಕವನ್ನು ಕಂಡು ಹಲವು ವಿದ್ವಾಂಸರು ವಿಹಾರಗಳು ಬೌದ್ಧರ ಮಠಗಳಾಗಿರಬಹುದು ಎಂದು ಹೇಳಬಹುದು. ಕಾರಣ ಅಶೋಕನ ಕಾಲದಲ್ಲಿ ಮಹಿಷಮಂಡಲಕ್ಕೆ ಧರ್ಮಪ್ರಸಾರಕ್ಕೆ ಹಲವು ಬಿಕ್ಕುಗಳನ್ನು ಕಳಿಸಿದ್ದರಿಂದ ಆ ಸನ್ನಿವೇಶದಿಂದಾಗಿ ಭೌದ್ಧರ ವಿಹಾರಗಳೇ ಮಠಗಳಾಗಿರಬಹುದೆಂಬ ನಿಲುವನ್ನು ತಾಳುವ ಸಾಧ್ಯತೆಗಳಿವೆ. ಆದರೆ ಅದು ಸತ್ಯಕ್ಕೆ ದೂರವಾದ ಮಾತು. ಆಗಿನ್ನು ಭೌದ್ಧ ವಿಹಾರಗಳು ಇಂದಿನ ಮಠದ ಸ್ವರೂಪ ಹೊಂದಿದ್ದವೆ ಎಂಬುವುದು ಪ್ರಶ್ನಾರ್ಹವಾಗಿ ತೋರುತ್ತದೆ. ಏಕೆಂದರೆ ಅಶ್ವಘೋಶನ ಈ ಶ್ಲೋಕವನ್ನು ಸೂಕ್ಷö್ಮವಾಗಿ ಗಮನಿಸಿದಾಗ ಅದು ಈ ರೀತಿಯ ಅರ್ಥ ಹೊಂದಿದೆ. ಎಲ್ಲಿ ವೇದಾಧ್ಯಯನ, ದೇವಪೂಜೆ, ದಾನ, ಧರ್ಮಾದಿ ಪರೋಪಕಾರಗಳು ನಡೆಯುತ್ತವೆಯೋ, ಯಾವುದು ಬ್ರಹ್ಮಜ್ಞಾನಿಗಳಾದ ಸನ್ಯಾಸಿಗಳಿಗೆ ಆಶ್ರಯ ತಾಣವೋ ಅದೇ ಮಠವೆಂಬುವುದು ಅವನ ಅಭಿಪ್ರಾಯ. ಇದನ್ನು ಸ್ಪಷ್ಟವಾಗಿ ಗಮನಿಸಿದರೆ ವಿಹಾರಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವೇ ಎಂದರೆ ಭಾಗಶಃ ಅದು ಒಪ್ಪಬಹುದಾದ ವಿಚಾರವಾಗಲಾರದು. ಕಾರಣ ವೇದಾಧ್ಯಯನ, ದೇವತೆ ಅಥವಾ ಮೂರ್ತಿಪೂಜೆ ಬೌದ್ಧರಲ್ಲಿ ನಿಷಿದ್ಧವಾಗಿತ್ತು. ಆದ್ದರಿಂದ ಜೈನರ ಬಸದಿಗಳನ್ನು ಮಠಗಳ ಹಿನ್ನೆಲೆಯಲ್ಲಿ ನೋಡಬಹುದಾದರೂ ಅವುಗಳಲ್ಲಿ ಈ ಕುರಿತಾದ ಐತಿಹಾಸಿಕ ದಾಖಲೆಗಳಿಲ್ಲ. ಮಠದ ಅತ್ಯಂತ ಪ್ರಾಚೀನ ಉಲ್ಲೇಖ ನಮಗೆ ಎಲ್ಲಿ ಸಿಗುತ್ತದೆ ಎಂದು ನೋಡುವುದಾದರೆ ಅದು ವೀರಶೈವ ಪಂಚಪೀಠಗಳಲ್ಲಿ ಒಂದಾದ ಕೇದಾರಪೀಠದಲ್ಲಿ. ಇದನ್ನು ‘ಉಷಾಮಠ, ಓಕಿಮಠ, ಊಖಿಮಠವೆಂತಲೂ ಕರೆಯುತ್ತಾರೆ.’ ಈ ಮಠದ ಆನಂದಲಿAಗ ಜಂಗಮರಿಗೆ ಜನಮೇಜಯ ರಾಜನು ಕೇದಾರವನ್ನು ದಾನಮಾಡಿ ಬರೆದುಕೊಟ್ಟ ತಾಮ್ರಶಾಸನದಲ್ಲಿ ಅತ್ಯಂತ ಪ್ರಾಚೀನ ‘ಮಠ’ ಶಬ್ದದ ಉಲ್ಲೇಖ ಸಿಗುತ್ತದೆ. ಈ ಶಾಸನದ ಲಿಪ್ಯಂತರಣದ ಮುದ್ರಣವನ್ನು ಕನ್ನಡ ಅಕ್ಷರಗಳಲ್ಲಿ ‘ವೀರಶೈವ ಪಂಚಪೀಠ ಪರಂಪರೆ’ ಪುಸ್ತಕದ ೪೮ನೇ ಪುಟದಲ್ಲಿ ನೀಡಲಾಗಿದ್ದು. ಈ ಶಾಸನದ ಐತಿಹಾಸಿಕತೆಯ ದೃಷ್ಠಿಯಿಂದ ಕೆಲವೇ ಶಬ್ದಗಳನ್ನು ಇಲ್ಲಿ ಎತ್ತಿಕೊಳ್ಳಲಾಗಿದೆ. ಒಂದು ಈ ದಾನಶಾಸನದ ಕಾಲ ಸೂಚಿಸುವ ‘ಸ್ವಸ್ತಿ ಶ್ರೀ ವಿಜಯಾಭ್ಯುದಯ ಯುಧಿಷ್ಠಿರ ಶಕೇ ಪ್ಲವಂಗಾಖ್ಯೆ ಏಕೋನನವತಿಮವತ್ಸರೇ ಸಹಸಿಮಾಸೇ, ಶ್ರೀ ಜನಮೇಜಯ ಭೂಪಾಲಃ ಇಂದ್ರಪ್ರಸ್ಥ ನಗರೀ ಸಿಂಹಾಸನಸ್ಥಃ| ಉತ್ತರ ಹಿಮಾಲಯೇ ಶ್ರೀ ಕೇದಾರಕ್ಷೇತ್ರೆ ತತ್ರತ್ಯ ಮುನೇರುಷಾಮಠಸ್ಯ ಶ್ರೀ ಗೋಸ್ವಾಮಿ ಆನಂದಲಿAಗ ಜಂಗಮ..’ ಇವಿಷ್ಟು ಪದಗಳು ಈ ಶಾಸನವು ಯಾರಿಂದ? ಯಾರಿಗೆ? ಯಾವಾಗ? ಮತ್ತು ಎಲ್ಲಿ ನೀಡಲ್ಪಟ್ಟಿತು ಎಂದು ತಿಳಿಸುತ್ತವೆ. ಹಿಂದಿ ವಿಕಿಪೀಡಿಯಾದಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಅತ್ಯಂತ ಪ್ರಾಚೀನವಾದ “ಉತ್ತರ ದಿಶಾ ಮೇ ಬದರಿಕಾಶ್ರಮ್ ಮೇ ಜ್ಯೋತಿರ್ಪೀಠದ ಕಾಲಮಾನ ಯುಧಿಷ್ಠಿರ ಶಕೆ ೨೬೪೧-೨೬೪೫ ಎಂದು ಹೇಳಲಾಗಿದೆ. ಶಂಕರಾಚಾರ್ಯರ ಕಾಲಮಾನ ೭ನೇ ಶತಮಾನವೆಂದು ಭಾವಿಸಿದರು ಅವರಿಗಿಂತ ಕ್ರಿ.ಪೂ.೨೬೦೦ದಿಂದ ಯುಧಿಷ್ಠಿರ ಶಕೆ ಆರಂಭಗೊAಡಿರುವುದು ಸ್ಪಷ್ಟವಾಗುತ್ತದೆ. ಹಲವು ವಿದ್ವಾಂಸರ ಅಭಿಪ್ರಾಯದಂತೆ ಶಂಕರಾಚಾರ್ಯರು ಕ್ರಿ.ಪೂ ೨೫೦೦ರ ಹಿಂದೆಯೇ ಆಗಿ ಹೋದವರೆಂದು ಭಾವಿಸಿದರೆ ಕ್ರಿ.ಪೂ. ೫೦೦೦ಕ್ಕೂ ಹಿಂದೆಯೇ ಯುಧಿಷ್ಠಿರ ಶಕೆ ಆರಂಭಗೊAಡAತಾಗುತ್ತದೆ. ಸದ್ಯ ಕ್ರಿ.ಪೂ. ೨೦೦೦ ವರ್ಷ ಎಂದೇ ಭಾವಿಸಿದರು ಜನಮೇಜಯ ರಾಜನು ದಾನಮಾಡಿ ಬರೆದುಕೊಟ್ಟ ತಾಮ್ರಶಾಸನ ‘ಯುಧಿಷ್ಠಿರ ಶಕೇ ಪ್ಲವಂಗಾಖ್ಯೆ ಏಕೋನನವತಿ’ ಅಂದರೆ ಯುಧಿಷ್ಠಿರ ಶಕೆಯ ಪ್ಲವಂಗನಾಮ ಸಂವತ್ಸರದ ೮೯ರಲ್ಲಿ ಅಂದರೇ ಯುಧಿಷ್ಠಿರ ಶಕೇ ಆರಂಭವಾದ ೮೯ನೇ ವರ್ಷ ಎಂದಾಗುತ್ತದೆ. ಅಂದರೆ ಅಲ್ಲಿಗೆ ಕ್ರಿ.ಪೂ.೨೦೦೦ ವರ್ಷಗಳಲ್ಲಿ ೮೯ ಕಳೆದರೆ ಕ್ರಿ.ಪೂ. ೧೯೧೧ರ ಪೂರ್ವದಲ್ಲೆ ಈ ಶಾಸನವನ್ನು ಜನಮೇಜಯನು ಉಷಾಮಠದ ಆನಂದಲಿAಗ ಜಂಗಮರಿಗೆ ಬರೆದುಕೊಟ್ಟಂತಾಗುತ್ತದೆ. ಈ ಮಠಕ್ಕೆ ಉಷಾ ಮಠವೆಂದು ಬರಲು ಕಾರಣ ಬಾಣಾಸುರನ ಮಗಳಾದ ಉಷೆಯು, ಈಕೆ ಅನಿರುದ್ಧನ ಪತ್ನಿ (ಪ್ರದ್ಯಮ್ನನ ಮಗ) ಕೇದಾರದ ಆಗಿನ ಜಗದ್ಗುರುಗಳಿಗೆ ಸುಂದರ ಮಠವನ್ನು ಕಟ್ಟಿಸಿಕೊಟ್ಟಿದ್ದರಿಂದ ಈ ಮಠ ಅಥವಾ ಪೀಠಕ್ಕೆ ಇಂದಿಗೂ ಉಷಾಮಠ, ಊಖಿಮಠ, ಓಖಿಮಠ ಎಂಬಿತ್ಯಾದಿಯಾಗಿ ಕರೆಯಲಾಗುತ್ತದೆ. ಇದರಿಂದ ಮಠದ ಪರಿಕಲ್ಪನೆಯು ಕ್ರಿ.ಪೂ. ೧೯೧೧ ಕ್ಕಿಂತ ಪೂರ್ವದಲ್ಲೆ ಇದ್ದದ್ದು ಗೊತ್ತಾಗುತ್ತದೆ. ಹೆಚ್ಚಾಗಿ ಮಠಗಳ ಪರಿಕಲ್ಪನೆ ಹರಪ್ಪ ಮೆಹೆಂಜೋದಾರ್ ಕಾಲದಲ್ಲಿಯೇ ಇದ್ದವು ಎಂದು ತೋರುತ್ತದೆ. ಆದರೆ ಅವು ಆ ಕಾಲಘಟ್ಟದಲ್ಲಿ ಇಂದಿನAತೆ ಸನ್ಯಾಸಿಮಠಗಳ ಸ್ವರೂಪ ಹೊಂದಿದ್ದAತೆ ಕಂಡುಬರುವುದಿಲ್ಲ. ಬದಲಿಗೆ ಜಂಗಮ(ವೀರ ಮಾಹೇಶ್ವರ)ರ ವಾಸಸ್ಥಳ(ಮನೆ)ಗಳನ್ನೆ ಮಠಗಳೆಂದು ಕರೆಯುತ್ತಿದ್ದಿರಬಹುದಾದ ಸಾಧ್ಯತೆಯುಂಟು. ಅಂದಿನಿAದ ಇಂದಿನವರೆಗೂ ಜಂಗಮ ಮನೆತನಕ್ಕೆ ಹಿರೇಮಠ, ಮಠದಯ್ಯ(ಮನೆಮಠ), ಮಠಪತಿ ಇತ್ಯಾದಿ ಪದಗಳನ್ನು ಬಳಸುವುದನ್ನು ಗಮನಿಸಿದಾಗ ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದಲ್ಲಿ ‘ಮಠ’ ಶಬ್ದವನ್ನು ಅರ್ಥೈಸುವಲ್ಲಿ ಬಳಸಲ್ಪಟ್ಟಿರುವ ‘ಗುರುಮನೆ’ ಎಂಬ ಪದವು ಈ ಹಿನ್ನಲೆಯಲ್ಲಿ ಬಳಸಲ್ಪಟ್ಟಿರುವಂತೆ ತೋರುತ್ತದೆ. ಸಾಮಾನ್ಯವಾಗಿ ಅತ್ಯಂತ ವಯೋವೃದ್ಧರು, ಸದಾಚಾರಗುಣ ಸಂಪನ್ನರಾದ ಜಂಗಮ(ವೀರಮಾಹೇಶ್ವರ) ತೀರಿಕೊಂಡಾಗ ಆತನಿಗೆ ಗದ್ದುಗೆ ಕಟ್ಟಿಸುವರು. ಅಂತಹ ಗದ್ದುಗೆಗಳಿರುವ ವಾಸಸ್ಥಳಗನ್ನೆ ಮಠಗಳೆಂದು ಹಿಂದಿನಿAದ ಕರೆದುಕೊಂಡು ಬರಲಾಗಿದೆ. ಈ ರೀತಿಯ ಗದ್ದುಗೆಯ ಅವಶೇಷಗಳು ಹರಪ್ಪ ಮೆಹೆಂಜೋದಾರ್ ಸಂಸ್ಕೃತಿಯ ಕಾಲದಲ್ಲಿಯೇ ಕಂಡು ಬರುತ್ತವೆ ಎಂಬುವುನ್ನು ಪ್ರಾಕ್ತನ ಶಾಸ್ತçಜ್ಞರು ಉಲ್ಲೇಖಿಸಿರುವುದರಿಂದ ಮಠಸ್ತರನ್ನು ಗುರುಗಳೆಂದೆ ಹಿಂದಿನಿAದಲೂ ಕರೆಯುತ್ತ ಬರಲಾಗಿದೆ. ಆದ್ದರಿಂದ ಗುರುಮನೆಗಳೇ ಅಂದು ಮಠಗಳಾಗಿದ್ದು, ವೈದಿಕರಲ್ಲಿ ಅವು ಆಶ್ರಮಗಳಾಗಿವೆ. ಮುಂದೆ ಈ ಗುರುಕುಲಗಳೇ ಬುದ್ಧರಲ್ಲಿ ವಿಹಾರ ಅಥವಾ ಸಂಘರಾಮಗಳಾಗಿಯೂ, ಜೈನರಲ್ಲಿ ಬಸದಿಗಳು ಎಂಬುವುದಾಗಿ ಗುರುತಿಸಲ್ಪಟ್ಟಿವೆ. ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ/ಮಠಗಳು ಎಂಬ ಲೇಖನದಲ್ಲಿ ಹೇಲಿರುವಂತೆ ‘ಸನ್ಯಾಸಿಗಳು ವಾಸಿಸುವ ಕುಟೀರ, ಇದು ಜ್ಞಾನಾನ್ವೇಷಣೆಯ ಧಾರ್ಮಿಕ ಕೇಂದ್ರ, ಇದು ಕ್ರಮೇಣ ಆಶ್ರಮ, ಗುರುಮನೆ, ಗುರುಕುಲಗಳಾಗಿ ಕಾಲ ಉರುಳಿದಂತೆ ಇದು ವಿದ್ಯಾಪ್ರಸಾರ, ಜ್ಞಾನ ಪ್ರಸಾರ, ಮತ ಪ್ರಸಾರದ ಕೇಂದ್ರಗಳಾಗಿ ಬೆಳೆದಿವೆ’ ಎಂದು ತಿಳಿಸಿದೆ. ಇದನ್ನು ಒಪ್ಪಬಹುದಾದರೂ ಈ ಮಠ ಶಬ್ದ ಜಂಗಮರ ಮನೆಯಿಂದ ಸನ್ಯಾಸಿ ಮಠದ ರೂಪ ಪಡೆಯಿತೋ ಅಥವಾ ಸನ್ಯಾಸಿಗಳ ಮಠ ಜಂಗಮ ಸಂಸಾರಿಗಳ ಮನೆಗೆ ಅನ್ವಯಿಸಿಕೊಂಡಿತೋ ಎಂಬುವುದರ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಗೆ ಒಳಪಡಿಸಬೇಕಾದ ಅಗತ್ಯವಿದೆ ಮತ್ತು ಇದಕ್ಕೆ ಪೂರಕವಾದ ದಾಖಲೆಗಳನ್ನು ಹುಡುಕಬೇಕಿದೆ.
ಪರಾಮರ್ಶನ ಗ್ರಂಥಗಳು
ಪAಚಾಮೃತ, ಪ್ರೊ. ಹೆಚ್.ಎ.ಬಿಕ್ಷಾವರ್ತಿಮಠ (ಪ್ರ.ಸಂ.), ಪ್ರಕಾಶಕರು ಅಧ್ಯಕ್ಷರು ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಸಮಿತಿ, ಹಿರೇಕಲ್ಮಠ-ಹೊನ್ನಳಿ, ೨೦೦೬
ವೀರಶೈವ ಪಂಚಪೀಠ ಪರಂಪರೆ - ಲೇ. ಶ್ರೀ ಷ. ಬ್ರ ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳು, ಅಮರೇಶ್ವರಮಠ. ಅ.ಸಿ. ಹಿರೇಮಠ (ಸಂ.), ಪ್ರಕಾಶಕರು ಶ್ರೀ ಜಗದ್ಗುರು ಸದ್ಧರ್ಮ ಸಿಂಹಾಸನ ಜ್ಞಾನಗುರು ವಿದ್ಯಾಪೀಠ, ಉಜ್ಜಯನಿ -೨೦೦೧ (ಪರಿಷ್ಕೃತ ಮುದ್ರಣ)
ಕರ್ನಾಟಕದ ವೀರಶೈವ ಮಠಗಳು, ಚಂದ್ರಶೇಖರ ನಾರಯಣಪುರ, ಗೆಳೆಯ ಪ್ರಕಾಶನ ಚಿಕ್ಕಮಗಳೂರು.
ಅಮರಕೋಶ, ಸಂ. ವಿದ್ವಾನ್ ಎನ್. ರಂಗನಾಥಶರ್ಮ, ಕಾವ್ಯಾಲಯ ಪಬ್ಲಿಷರ್ ಮೈಸೂರು, ಪ್ರಥಮ ಮುದ್ರಣ - ೧೯೭೫.
ಅಮರಕೋಶ, ಸಂ. ವಿದ್ವಾನ್ ಎನ್. ರಂಗನಾಥಶರ್ಮ, ಹರ್ಷ ಪ್ರಿಂರ‍್ಸ್, ೧೫ನೇ ತಿರುವು ಬಸವೇಶ್ವರ ರಸ್ತೆ ಮೈಸೂರು-೫೭೦೦೦೪, ೨೦೦೫
ಗುರುವಂಶಕಾವ್ಯ, ಕಾಶೀಲಕ್ಷಣಶಸ್ತಿçÃ, ಸಂ. ಕುಣಿಗಲ್ ರಾಮಾ ಶಾಸ್ತಿçÃಗಳು, ಶ್ರೀರಂಗಮ್, ಶ್ರೀ ವಾಣಿವಿಲಾಸ ಪ್ರೇಸ್.
ಸಮಾಜ ವಿಕಾಸದಲ್ಲಿ ಮಠಗಳ ಪಾತ್ರ ಒಂದು ವಿಮರ್ಶಾತ್ಮಕ- ವಿಶ್ಲೇಷಣಾತ್ಮಕ ಅಧ್ಯಯನ, ಡಾ. ಶ್ರೀನಿವಾಸ್‌ರಾವ್ ಎಸ್. ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ. (ಅಪ್ರಕಟಿತ ಸಂಶೋಧನಾ ಮಹಾಪ್ರಬಂಧ)
ಆದಿ ಜಗದ್ಗುರು ರೇಣುಕಾಚಾರ್ಯ, ಕಾಶೀನಾಥಶಾಸ್ತಿçÃ, ಐib… ಸಮಿತಿ, ಬೆಂಗಳೂರು. ಂಛಿಛಿess ಟಿo:೨೧೨೧೩
ವೀರಶೈವ ಆಕರಗಳು – ಡಾ. ಸಿ. ಎಂ. ವೀರಭದ್ರಯ್ಯ
ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ/ಮಠಗಳು-ವಿಕಿಸೋರ್ಸ್
www.kn.wiki source.org/wiki…….
Comments