ಶ್ರೀಕೀರ್ತಿ, ಬಿ ಎನ್ ರವರ ಕವಿತೆಗಳು ಮತ್ತು ಅನುವಾದಗಳು
ಮೂಲ: The Jaguar by Ted Huges
ಕನ್ನಡಕ್ಕೆ: ಶ್ರೀಕೀರ್ತಿ. ಬೀ. ಎನ್.
ವಾನರು ಆಕಳಿಸಿ ಆರಾಧಿಸುತ್ತಿದ್ದವು ತಮ್ಮ ಚಿಗಟಗಳನ್ನು ಬಿಸಿಲಿನಲ್ಲಿ.
ಗಿಣಿಗಳು ಚೀರುತ್ತಿದ್ದವು ಬೆಂಕಿಯಲ್ಲಿ ಬಿದ್ದವರಂತೆ
ಅಥವ ಕಡಲೆ ಹಿಡಿದು ಬಿಂಕದಿದ್ದವೋ ದಾರಿಹೋಕರ ಅಣಕಿಸುವ ಅಗ್ಗದ ಸೂಳೆಯರಂತೆ,
ಹುಲಿ ಮತ್ತು ಸಿಂಹ ಆಯಾಸಗೊಂಡಿದ್ದವು ಆಲಸ್ಯದಲ್ಲಿ
ತಟಸ್ಥವಾಗಿ ಸರ‍್ಯನಂತೆ. ಅದುಮಿಕೊಂಡ ಹೆಬ್ಬಾವಿನ ಸುರಳಿ ಅಲ್ಲೆ
ಪಳೆಯುಳಿಕೆ. ಖಾಲಿಯಾದಂತ್ತಿದ್ದವು ಒಂದೊಂದು ಬೋನುಗಳು
ಅಥವ ಪರಿಮಳದ ಹುಲ್ಲಿನಿಂದ ಸೂಸುವ ನಿದ್ರಿಸುವವರ ನಾತಗಳು.
ಬಣ್ಣಹಚ್ಚಿರಬಹುದಿತ್ತು ಇವುಗಳೆಲ್ಲವನ್ನು ಶಿಶುವಿಹಾರದ ಗೋಡೆಯ ಮೇಲೆ.
ಆದರೆ ಎಲ್ಲರಂತೆ ಇವುಗಳನ್ನು ಹಾದು ಹೋದವರು ತಲುಪಿದ್ದರು ಅಲ್ಲಿಗೆ,
ಮಗುವೊಂದು ಕನಸು ಕಾಣುವಂತೆ, ವಶೀಕರಣಗೊಂಡ ಗುಂಪೊಂದು ದಿಟ್ಟಿಸಿ ನಿಂತು
ಭಯಾನಕ ಕಿಡಿಯ ಕಣ್ಣುಗಳಿಂದ ನಡೆಸಿ ಒಂದು ಸಣ್ಣ ಕವಾಯತು
ಕತ್ತಲ ಜೈಲಿನಿಂದ ಕೆರಳಿ ಮುನ್ನುಗ್ಗುತ್ತಿದ್ದ ಚಿರತೆಯ ನೋಡುತ್ತಿದ್ದ ಬೋನಿನ ಬಳಿಗೆ.
ಸಮಾಧಾನವಾಯಿತು ಕಣ್ಣಿಗೆ, ಕುರುಡಾಗಿದ್ದಕ್ಕೆ ಬೆಂಕಿಯಲ್ಲಿ,
ಕಿವುಡಾಗಿಸಿತ್ತು ಕಿವಿಯನ್ನು ಅಪ್ಪಳಿಸಿ ರಕ್ತವು ಮೆದುಳಿಗೆಲ್ಲ.
ಆದರೆ ಅವನು ಸರಳುಗಳ ಹಿಂದೆ ಅಡ್ಡಾಡುತ್ತಿರುವುದು ಬೇಸರದಿಂದಲ್ಲ
ಅತನಿಗೆ ಯಾವುದೇ ಬೊನಿಲ್ಲ ಅಲ್ಲಿ.
ಗೂಡಿಗಿಂತ ಮಿಗಿಲಾಗಿ ದರುಶನವಾದದ್ದು
ಅವನ ಅಪರಿಮಿತ ಸ್ವಾತಂತ್ರದ ದಾಪುಗಾಲು
ಬಿಗಿ ಹಿಮ್ಮಡಿಯ ಒತ್ತಡಕ್ಕೆ ಜಗತ್ತು ಸುತ್ತಲು
ಅವನ ಬೋನಿನ ನೆಲದ ಮೇಲೆಯೆ ದಿಗಂತ ಹುಟ್ಟಿದ್ದು.
Comments