top of page

ರಿಚರ್ಡ್ ಕೋರಿ

ಮೂಲ: Richard Cory by Edwin Arlington Robinson

ಕನ್ನಡಕ್ಕೆ: ಶ್ರೀಕೀರ್ತಿ. ಬೀ.ಎನ್.

 

ಎಂದಾದರು ರಿಚರ್ಡ್ ಕೋರಿ ಪಟ್ಟಣದಲ್ಲಿ ನಡೆದ್ಹೋಗುತ್ತಿದ್ದರೆ ಇಳಿದು ಕೆಳಗಡೆ

ನಾವು ಜನಗಳು ಹಾದಿಯಲ್ಲಿ ನಿಂತು ನೋಡುತ್ತಿದ್ದೆವು ಅವನೆಡೆ:

ಅಡಿಯಿಂದ ಮುಡಿವರೆಗೆ ಆಗಿದ್ದನವನೊಬ್ಬ ಸಜ್ಜನ ಎಲ್ಲೆಡೆ,

ಸಂಪೂರ್ಣ ದಯಾಮಯಿ, ಜೊತೆಗೆ ಚಕ್ರವರ್ತಿಯ ಸೂಕ್ಷ್ಮ ನಡೆ.

ಅವನ ಅಲಂಕಾರ ಯಾವಾಗಲು ಇರುತ್ತಿದ್ದೇ ನಿರಾಡಂಬರ,

ಯಾವಾಗಲಾದರು ಮಾತನಾಡಿದಾಗ ನಿರ್ಹಂಕಾರ,

ಕಂಪಿಸುತ್ತಿದ್ದವು ಅವನ ನಾಡಿಗಳ ನಾವು ಹೇಳಿದಾಗ “ನಮಸ್ಕಾರ”,

ಆದರೂ ಅವನು ನಡೆದಾಡಿದಾಗ ಬೆಡಗು ಪ್ರಕರ.

ಅವನೊಬ್ಬ ಶ್ರೀಮಂತನಾಗಿದ್ದ–ಬಲು ಶ್ರೀಮಂತ ರಾಜನಿಗಿಂತ—

ಪ್ರತಿ ಗಾಂಭೀರ್ಯದಲ್ಲೂ ಶ್ಲಾಘನೀಯ ಶಿಕ್ಷಿತ.

ಒಟ್ಟಿನಲ್ಲಿ ನಾವಂದುಕೊಂಡಿದ್ದೆವು ಅವನ ಜಾಗದಲ್ಲಿ ನಾವಿರಬೇಕಂತ

ಎಂಬಷ್ಟು ಎಲ್ಲವೂ ಅವನಾಗಿದ್ದ ಅಪೇಕ್ಷಿತ.

ಅದರಂತೆ ದುಡಿದೆವು ಮಾಂಸವಿಲ್ಲದೆ ವಾರದವರೆಗೆ,

ಅಂತಹ ದಿನಕ್ಕಾಗಿ ಕಾದೆವು ಶಪಿಸುತ್ತ ಮನದಲ್ಲೆ ಹೊಟ್ಟೆಗೆ;

ಆದರೆ ರಿಚರ್ಡ್ ಕೋರಿ ಒಂದು ನಿಶ್ಯಬ್ದ ರಾತ್ರಿ ಅಂದು ಬೇಸಿಗೆ

ಮನೆಗೆ ಹೋದವನೆ ಗುಂಡು ಹಾರಿಸಿಕೊಂಡನು ತಲೆಗೆ.


Comments


bottom of page