Obalesha T, Kannada Bharathi, Kuvempu University
Mobil-9535450208
ಮಾನವನು ಹುಟ್ಟಿನಿಂದಲೇ ಸುಸಂಸ್ಕೃತ ವ್ಯಕ್ತಿಯಾಗಿ ನಾಗರಿಕನಾಗಿ ಹುಟ್ಟಿ ಬಂದಿರುವುದಿಲ್ಲ. ಆತ ಹುಟ್ಟಿದ ನಂತರದಲ್ಲಿ ತನ್ನ ಸುತ್ತಮುತ್ತಲಿನ ಪರಿಸರಗಳಿಗೆ ಅನುಗುಣವಾಗಿ ತನ್ನ ಸಂಸ್ಕೃತಿಯನ್ನು ರೂಢಿಸಿಕೊಳ್ಳುತ್ತಾನೆ. ಮಾನವನಿಗೆ ಉಸಿರಾಟದಷ್ಟೇ ಮುಖ್ಯವಾದುದು ಜನಪದ ಕಲೆ. ಪುರಾತನ ಕಾಲದಿಂದಲೂ ಜನಪದ ಕಲೆಯನ್ನು ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಉಳಿಸಿಕೊಂಡು ಬಂದಿದ್ದಾರೆ. ಮನುಷ್ಯನ ಸಾಂಸ್ಕೃತಿಕ ಚರಿತ್ರೆಗೂ ಜನಪದ ಕಲೆಗಳ ಉಗಮಕ್ಕೂ ಅವಿನಭಾವ ಸಂಬAಧವಿದೆ. ಈ ಮಾತನ್ನು ಗಮನದಲ್ಲಿರಿಸಿಕೊಂಡೆ ನಮ್ಮ ಜನಪದ ಕಲೆಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.
ಜನಪದ ಕಲೆಗಳು ಮನುಷ್ಯನಷ್ಟೇ ಪ್ರಾಚೀನವಾದವು. ಅನುಕರಣೆಯಿಂದ ಅರಿತುದ್ದನ್ನು ಒಂದೆಡೆ ದಾಖಲಿಸಬೇಕೆಂದು ಮನುಷ್ಯ ಸಹಜ ಗುಣದಿಂದ ಇಂತಹ ಕಲೆಗಳು ಅಸ್ತಿತ್ವಕ್ಕೆ ಬಂದಿವೆ. ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನ ಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿದೆ.
ಕರ್ನಾಟಕ ಜನಪದ ಕಲೆಯು ತುಂಬಾ ಶ್ರೀಮಂತವಾಗಿ ಬೆಳೆದಿದೆ. ಕರ್ನಾಟಕದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಜನಪದ ಕಲೆಗಳು ಹೆಚ್ಚು ವೈವಿಧ್ಯಮಯವಷ್ಟೇ ಅಲ್ಲದೆ ಸಂಖ್ಯೆಯಲ್ಲಿಯೂ ಹೆಚ್ಚಿವೆ. ಇದಕ್ಕೆ ಕಾರಣ ಚಿತ್ರದುರ್ಗ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಮತ್ತು ಭೌಗೋಳಿಕ ಹಿನ್ನೆಲೆಯಾಗಿದೆ.
ಚಿತ್ರದುರ್ಗ ಜಿಲ್ಲೆಯು ಬಯಲು ಸೀಮೆ, ಬಿಸಿಲು ಸೀಮೆ, ಬರಗಾಲದ ನಡುವೆಯೂ ಮೈ ನವಿರೇಳಿಸುವ ವೈವಿಧ್ಯಮಯ ಜನಪದ ಸಂಸ್ಕೃತಿಯನ್ನು ಸದಾ ಬೆಳೆಸುತ್ತಾ ಪ್ರದರ್ಶಿಸುತ್ತಾ ಬಂದಿರುವುದು ಈ ನೆಲದ ವಿಶೇಷ. ಈ ಭಾಗದಲ್ಲಿ ನೆಲೆಸಿರುವ ಕಾಡುಗೊಲ್ಲರು, ಮ್ಯಾಸಬೇಡರು, ಕುರುಬರು, ಪರಿಶಿಷ್ಟ ಜಾತಿ ವರ್ಗದ ಜನಾಂಗಗಳು ತಮ್ಮ ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಆ ಸಂಬAಧಿ ಆಚರಣೆ, ಸಂಪ್ರದಾಯ, ನಂಬಿಕೆ, ನಡವಳಿಯನ್ನು ಹಾಡಾಗಿ, ಕುಣಿತವಾಗಿ, ಕಥೆಯಾಗಿ, ಗಾದೆ ಒಗಟುಗಳ ಮೂಲಕ, ಮೌಖಿಕ ಪರಂಪರೆಯಲ್ಲಿ ಯಥವತ್ತಾಗಿ, ಕಾಯ್ದುಕೊಂಡು ಬಂದಿರುವುದು ಈ ನೆಲದ ಜನಪದ ಸಂಸ್ಕೃತಿಯ ಸಿರಿವಂತಿಕೆಗೆ ಸಾಕ್ಷಿಯಾಗಿದೆ. ಹೀಗೆ ಅಪರಿಮಿತವಾದ ಜನಪದ ಕಲೆಗಳು ಹೊಂದಿರುವ ಈ ನೆಲದಲ್ಲಿ ಹಾಡು, ಗಾದೆ, ಕಥೆಗಳು, ಜನಪದ ಮಹಾಕಾವ್ಯವು ಮೌಖಿಕ ಪರಂಪರೆಯಲ್ಲಿ ರಾರಾಜಿಸುತ್ತಿದೆ.
ಚಿತ್ರದುರ್ಗ ಜಿಲ್ಲೆಯು ಹಿಂದುಳಿದ ಪ್ರದೇಶವಾಗಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದರೂ ಸಾಂಸ್ಕೃತಿಕವಾಗಿ ಅಥವಾ ಜನಪದ ಕಲೆಗಳಲ್ಲಿ ಶ್ರೀಮಂತವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ಜನಪದ ಕಲೆಗಳು ಮತ್ತು ಕಲಾವಿದರು ಇರುವರು. ಅತಿ ಹೆಚ್ಚು ಕಲಾವಿದರು ತಳಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ತಮ್ಮ ಕಲೆಯನ್ನು ಪ್ರದರ್ಶನ ಮಾಡುತ್ತಾ ಬರುತ್ತಿದ್ದಾರೆ. ಈ ಜಿಲ್ಲೆಯಲ್ಲಿ ಕೋಲಾಟ, ಬಯಲಾಟ, ಉರುಮೆ, ಕಹಳೆ, ತಮಟೆ, ಬೇಡರ ಕುಣಿತ, ಚೌಡಕಿ, ಭಜನೆ, ಅಸಾದಿ. ಡೊಳ್ಳು ಕುಣಿತ, ವೀರಗಾಸೆ, ಬುಡಬುಡಿಕೆ, ಸೋಬಾನೆ ಇತ್ಯಾದಿ ಕಲೆಗಳನ್ನು ನೋಡಬಹದು.
ಜನಪದ ಕಲೆಗಳು ಸ್ಥಳೀಯ ಜನರ ಜನಾಂಗೀಯತೆ ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುವ ದೃಶ್ಯ ಕಲೆಗಳಾಗಿವೆ. ಅವರು ಸಮಾಜದ ಸಾಂಸ್ಕೃತಿಕ ಜೀವನವನ್ನು ಚಿತ್ರಿಸುತ್ತಾರೆ. ಜನಪದ ಕಲೆಗಳು ಗ್ರಾಮೀಣ ಜನ ಜೀವನದ ಹೆಮ್ಮೆಯ ಸಂಗತಿಗಳು, ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ಜನಪÀದ ಕಲೆಗಳನ್ನು ಮತ್ತು ಕಲಾವಿದರನ್ನು ನೋಡಬಹುದು. ಇಂದಿಗೂ ಇವರು ಜನಪದ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. ಜನಪದ ಕಲೆಗಳು ತುಂಬಾ ಪ್ರಾಮುಖ್ಯತೆಯನ್ನು ಹೊಂದಿವೆ. ಸಾಂಸ್ಕೃತಿಕ ಪರಂಪರೆ ಸಂರಕ್ಷಣೆಯಾಗುತ್ತದೆ. ಸಮುದಾಯದ ಅಸ್ಮಿತೆ ಮತ್ತು ಸಾಮಾಜಿಕ ಒಗ್ಗಟ್ಟು ಬೆಳೆಯುತ್ತದೆ. ಹಾಗೆಯೇ ಚಿತ್ರದುರ್ಗ ಜಿಲ್ಲೆಯ ವಿಶಿಷ್ಟ ಸಂಸ್ಕೃತಿ-ಸAಸ್ಕಾರಗಳು ಈ ಕಲೆಗಳಲ್ಲಿ ಅಡಗಿದೆ.
ಭಾರತ ದೇಶದ ರಾಜ್ಯಗಳಲ್ಲಿ ಒಂದಾದ ಕರ್ನಾಟಕ ರಾಜ್ಯದ ೩೧ ಜಿಲ್ಲೆಗಳಲ್ಲಿ ಚಿತ್ರದುರ್ಗ ಜಿಲ್ಲೆಯು ಒಂದಾಗಿದೆ. ಕರ್ನಾಟಕ ಮಧ್ಯಭಾಗದ ಜಿಲ್ಲೆಯಾಗಿದೆ. ಈ ಜಿಲ್ಲೆಯು ಶೌರ್ಯ ಮತ್ತು ಪರಾಕ್ರಮಕ್ಕೆ ಹೆಸರಾಗಿದೆ. ಮೂಲತಃ ಈ ನಗರಕ್ಕೆ ಚಿತ್ರಕಲ್ಲುದುರ್ಗ, ಚಿನ್ಮೂಲಾದ್ರಿ. ಚಿಂತಲಕಲದುರ್ಗ, ಚಿಂತಲ ಕಲ್ಲುದುರ್ಗ, ಟಿಪ್ಪು ಸುಲ್ತಾನನ ಕಾಲದಲ್ಲಿ ಫದ್ರಶಾಬಾದ್ ಎಂದು ಬ್ರಿಟಿಷರ ಕಾಲದಲ್ಲಿ ಚಿಡಲು ಹುಗ್ ಎಂದು ಅಂತಿಮವಾಗಿ ಹಾಲಿ ಚಿತ್ರದುರ್ಗ ಎಂದು ಗುರುತಿಸಿಕೊಂಡಿರುತ್ತದೆ.
ಕರ್ನಾಟಕ ಮಧ್ಯಭಾಗದಲ್ಲಿರುವ ಚಿತ್ರದುರ್ಗ ಜನಪದ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದೆ. ಚಿತ್ರದುರ್ಗ ಜಿಲ್ಲೆಯು ಭೌಗೋಳಿಕವಾಗಿ ಈ ಜಿಲ್ಲೆಯ ಮೇರೆಗಳೆಂದರೆ ಉತ್ತರಕ್ಕೆ ಬಳ್ಳಾರಿ. ಪೂರ್ವಕ್ಕೆ ಅಂಧ್ರ ಪ್ರದೇಶ, ಆಗ್ನಿಯ ದಿಕ್ಕಿಗೆ ತುಮಕೂರು. ಪಶ್ಚಿಮಕ್ಕೆ ದಾವಣಗೆರೆ ಮತ್ತು ನೈರುತ್ಯಕ್ಕೆ ಚಿಕ್ಕಮಗಳೂರು ಜಿಲ್ಲೆಗಳಿಂದ ಸುತ್ತುವರೆಯಲ್ಪಟ್ಟಿದೆ. ಚಿತ್ರದುರ್ಗ ಜಿಲ್ಲೆಯ ಒಟ್ಟು ಜನಸಂಖ್ಯೆ ೨೦೧೧ರ ಜನಗಣತಿಯ ಪ್ರಕಾರ ೧೬.೫೯,೪೫೬ ಇದೆ. ಆದರೆ ಪ್ರಸ್ತುತ ಇನ್ನು ಹೆಚ್ಚಾಗಿರುವುದನ್ನು ನೋಡಬಹುದು. ಈ ಜಿಲ್ಲೆಯು ಬೆಟ್ಟ ಗುಡ್ಡಗಳನ್ನು ಸಹ ಹೊಂದಿದೆ. ಈ ಜಿಲ್ಲೆಯ ವಾಸ್ತವಿಕ ಭೌಗೋಳಿಕ ನೆಲೆಯು ಉತ್ತರ ಅಕ್ಷಾಂಶ ೧೩.೧೫ ರಿಂದ ೧೫ಲಿ.೨೦ ಮತ್ತು ರೇಖಾಂಶ ೭೬ಲಿ.೨೪ ರಿಂದ ೭.೨೦ ರಲ್ಲಿದೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ವಾರ್ಷಿಕ ಸರಾಸರಿ ೪೮೬.೬ ಮಿ.ಮಿ. ಜಿಲ್ಲೆಯ ಜೋಗಿಮಟ್ಟಿ ಹೆಚ್ಚು ವೇಗದ ಗಾಳಿ ಬೀಸುತ್ತದೆ. ಈ ಜಿಲ್ಲೆಯು ಸಾಂಸ್ಕೃತಿಕವಾಗಿಯು ತುಂಬಾ ವಿಶಿಷ್ಟವಾದಂತಹ ಸ್ವರೂಪವನ್ನು ಹೊಂದಿದೆ. ಹಲವಾರು ಹಬ್ಬ, ಹರಿದಿನ, ಜಾತ್ರೆ, ಸಂಪ್ರದಾಯಗಳು, ವಿಶೇಷ ಉಡುಗೆ, ತೊಡುಗೆ, ಜನಪದ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ.
ಧರ್ಮ, ದೇವರು, ಆರಾಧನೆ, ಪಂಗಡ ಹಾಗೂ ಸಾಮಾಜಿಕ ಶ್ರೇಣಿಕರಣಿಗಳ ಸಂಕೀರ್ಣ ಬದುಕು ಹೇಗೆ ಈ ಕಲಾ ಜಗತ್ತಿನ ಮೇಲೆ ಪ್ರಭಾವ ಬೀರಿತು ಮತ್ತು ಆ ಮೂಲಕ ಜನಪದ ಕಲೆಗಳು ಕಂಡುಕೊAಡ ಸ್ಥಾನಗಳೇನು ಎಂಬ ವಿಚಾರಗಳು ಕರ್ನಾಟಕದ ಮಟ್ಟಿಗಂತೂ ವಿಸ್ಮಯಕಾರಿ. ಕರ್ನಾಟಕದಲ್ಲಿ ವಿವಿಧ ಪ್ರದೇಶಗಳಾಗಿ ಹಲವರು ಜನಪದ ಕಲೆಗಳಿದ್ದು ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಹಲವಾರು ಜನಪದ ಕಲೆಗಳು ಮತ್ತು ಕಲಾವಿದರನ್ನು ಕಾಣಬಹುದಾಗಿದೆ.
ಚಿತ್ರದುರ್ಗ ಜಿಲ್ಲೆಯ ಜನಪದ ಕಲೆಗಳಲ್ಲಿ ಮೊದಲನೆಯದಾಗಿ ಗಂಡು ಕಲೆಯಾದ ಉರುಮೆಯು ತುಂಬಾ ಮಹತ್ವವನ್ನು ಹೊಂದಿದೆ. ಈ ಕಲೆಯನ್ನು ತಳ ಸಮುದಾಯವಾದ ಆದಿ ದ್ರಾವಿಡ ಸಮುದಾಯವು ಹೆಚ್ಚಾಗಿ ಬಳಸುತ್ತಾರೆ. ಕಹಳೆ ವಾದ್ಯ ಎಂದರೆ ಉದ್ದವಾಗಿ ಬಾಗಿರುವ ತುತ್ತೂರಿಯಾಗಿದೆ. ಇದನ್ನು ಯುದ್ಧದ ಸಂದರ್ಭದಲ್ಲಿ ಹೆಚ್ಚಾಗಿ ಬಳಸುತ್ತಿದ್ದರು. ಪ್ರಸ್ತುತ ಕಹಳೆಯು ದೇವರ ಜಾತ್ರೆಗಳಲ್ಲಿ ಮತ್ತು ದೇವರ ಮೆರವಣಿಗೆಯಲ್ಲಿ ಇದನ್ನು ಬಳಸುವರು. ಇಂದಿಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಈ ಕಲಾವಿದರು ಇರುವುದನ್ನು ನೋಡಬಹುದು. ಮತ್ತೊಂದು ಕಲೆ ಎಂದರೆ ತಮಟೆ. ಇದನ್ನು ಮೇಕೆ ಮತ್ತು ಕುರಿಗಳ ಚರ್ಮದಿಂದ ಮಾಡಿದ ವಾದ್ಯವಾಗಿದೆ. ಇದನ್ನು ಸಹ ತಳ ಸಮುದಾಯದವರು ಹೆಚ್ಚಾಗಿ ಬಳಕೆ ಮಾಡುವರು. ಈ ವಾದ್ಯವು ತುಂಬಾ ಮನರಂಜನೆಯನ್ನು ಕೊಡುವ ವಾದ್ಯವಾಗಿದೆ.
ಜನಪದ ಕಲೆಗಳಲ್ಲಿ ಗಂಡು ಕಲೆ ಎನಿಸಿರುವ ಡೊಳ್ಳು ಕುಣಿತವು ಪುರುಷರಿಗೆ ಮೀಸಲಾದ ಕಲೆಯಾದರೂ ಇಂದು ಮಹಿಳೆಯರು ಸಹ ಬಳಸುವರು. ಈ ಕಲೆಗೆ ಮೈಕಟ್ಟು ಮತ್ತು ಶಕ್ತಿ ಉಳ್ಳ ಕಲಾವಿದರು ಮಾತ್ರ ಈ ಕಲೆಯನ್ನು ಪ್ರದರ್ಶಿಸಬಲ್ಲರು. ಇದು ಮೂಲತಃ ಕುರುಬ ಜನಾಂಗದ ವಾದ್ಯವಾಗಿರುವ ಡೊಳ್ಳು ಹಳ್ಳಿಯ ಸಂಸ್ಕೃತಿ ಜೀವನದೊಂದಿಗೆ ಸಮರಸವಾಗಿ ಬೆರೆತುಕೊಂಡಿದೆ. ಚಿತ್ರದುರ್ಗ ಜಿಲ್ಲೆಯು ಎಲ್ಲ ಜಾತ್ರೆಗಳಲ್ಲೂ ಬಹುತೇಕವಾಗಿ ಇದನ್ನು ಪ್ರದರ್ಶಿಸುವರು, ಹಾಗೆಯೇ ಅನೇಕ ಕಲಾವಿದರು ಇರುವರು.
ಚಿತ್ರದುರ್ಗ ಜಿಲ್ಲೆಯಲ್ಲಿ ಬೇಡರ ಕುಣಿತ ವಿಶೇಷವಾಗಿದೆ. ಬೇಡವೇಷದಾರಿಯ ಸೊಂಟಕ್ಕೆ ಹಗ್ಗ ಕಟ್ಟಿ ಮೂರು ನಾಲ್ಕು ಜನ ಹಿಡಿದುಕೊಂಡಿರುತ್ತಾರೆ. ಆಗ ಆತನ ವೇಷಭೂಷಣ, ಆವೇಶದಿಂದ ಅಬ್ಬರಿಸುವ ರೀತಿ, ಕೋಪದಿಂದ ದೃಷ್ಟಿಸುತ್ತ, ನೃತ್ಯ ಮಾಡುವ ಭಂಗಿ, ಇದನ್ನೆಲ್ಲ ಗಮನಿಸಿದಾಗ ಬಂಧನಕ್ಕೆ ಒಳಗಾದ ಬೇಡರಾಜನ ಹಿನ್ನೆಲೆ ಇರಬಹುದೆಂದು ಅನಿಸುತ್ತದೆ.
ಬುಡುಬುಡಿಕೆಯವರು ಚಿತ್ರದುರ್ಗ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಇದ್ದರೂ ಹಲವರು ಇರುವರು. ಬುಡುಬುಡುಕೆಯು ಶಿವನ ಪವಿತ್ರವಾದ ವಾದ್ಯ ಎಂಬುದನ್ನು ತಿಳಿಯಬಹುದಾಗಿದೆ. ಗೊರವರ ಕುಣಿತವು ಪ್ರಸಿದ್ದಿಯಾಗಿದೆ. ಗೊರವರು ಮೈಲಾರಲಿಂಗನ ಭಕ್ತರು. ಗೊರವರಲ್ಲಿ ಕೆಲವರು ಮೈಲಾರಲಿಂಗನಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ. ಇವರ ವೇಷ ಭೂಷಣ ಮುರಗಿ-ಮುಂಡಾಸು ಇಲ್ಲವೇ ಕಂಬಳಿಯ ಕುಲಾವಿ, ಕವಡಸರ, ಹೆಗಲಲ್ಲಿ ಜೋಳಿಗೆ, ದೋಣಿ, ಭಂಡಾರ ಬಕ್ರ, ಗಂಟೆ, ತ್ರಿಶೂಲ, ನಾಗಬೆತ್ತ, ಡಮರು ಇವು ಗೊರವರಲ್ಲಿ ಸಾಮಾನ್ಯವಾದ ಅಗತ್ಯವಾದ ಸಲಕರಣೆಗಳು.
ಕೋಲಾಟವು ಚಿತ್ರದುರ್ಗ ಜಿಲ್ಲೆಯ ಪ್ರಸಿದ್ದ ಜನಪದ ಕಲೆಯಾಗಿದೆ. ಇದೊಂದು ಗಂಡು ಕಲೆಯಾಗಿದ್ದರು ಮಹಿಳೆಯರು ಸಹ ಈ ಕಲೆಯನ್ನು ಪ್ರದರ್ಶಿಸುವರು. ಕೋಲಾಟದ ವೇಷ ಭೂಷಣವು ತುಂಬಾ ವೈವಿಧ್ಯಮಯವಾಗಿದೆ. ಬಿಳಿಯಂಗಿ, ತಲೆಗೆ ಮತ್ತು ನಡುವಿಗೆ ಬಣ್ಣದ ವಸ್ತ್ರ ಹಾಕಿರುತ್ತಾರೆ. ಕಾಲಿಗೆ ಗೆಜ್ಜೆ ಕಟ್ಟಿರುತ್ತಾರೆ. ಕೋಲುಗಳ ಚಪ್ಪಾಳೆ ಹಾಡಿಗೆ ಪೂರಕವಾದ ತಾಳವಾಗಿದೆ. ಇದನ್ನು ಹೆಚ್ಚಾಗಿ ಕಾಡುಗೊಲ್ಲರು, ಮ್ಯಾಸಬೇಡರು ಹೆಚ್ಚಾಗಿ ಕಲೆಯನ್ನು ಬಳಸುವರು.
ಬಯಲಾಟವು ಸಹ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಸಿದ್ದಿಯಾಗಿದೆ. ಬಯಲಾಟದಲ್ಲಿ ಕರಿ ಬಂಟನ ಕಾಳಗ, ಇತ್ಯಾದಿ ಕತೆಗಳನ್ನು ಪ್ರದರ್ಶನ ಮಾಡುವರು. ಇದು ಪ್ರಾಚೀನ ಕಾಲದಿಂದಲೂ ಗ್ರಾಮೀಣರಿಗೆ ಮನರಂಜನೆ ಒದಗಿಸಿಕೊಂಡು ಬರುತ್ತಿರುವ ಹವ್ಯಾಸಿ ಕಲೆ. ಚಿತ್ರದುರ್ಗ ಜಿಲ್ಲೆಯಲ್ಲಿ ತಿಪ್ಪೇಸ್ವಾಮಿ, ಅಡವಿ ಸುರನಾಯಕ, ಬೋಸಯ್ಯ, ರಾಮಚಂದ್ರಪ್ಪ, ಹನುಮಂತಪ್ಪ ಇತ್ಯಾದಿ ಪ್ರಸಿದ್ಧ ಕಲಾವಿದರನ್ನು ನೋಡಬಹುದು.
ಚಿತ್ರದುರ್ಗ ಜಿಲ್ಲೆಯಲ್ಲಿ ಸೋಬಾನೆ ಕಲೆಯು ಪ್ರಸಿದ್ದಿ ಹೊಂದಿದೆ. ಸೋಬಾನೆ ಮದುವೆ ಸಮಾರಂಭಗಳಲ್ಲಿ, ಜಾತ್ರೆ ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಸಿರಿ ಅಜ್ಜಿ ಸೋಬಾನೆ ಪದಗಳಲ್ಲಿ ಪ್ರಸಿದ್ಧಿಯನ್ನು ಹೊಂದಿದ್ದಾರೆ. ಇವರು ಹಂಪಿ ವಿಶ್ವವಿದ್ಯಾನಿಲಯ ನೀಡುವ ನಾಡೋಜ ಪ್ರಶಸ್ತಿಯನ್ನು ಪಡೆದ ಹಿರಿಮೆ ಇವರದ್ದಾಗಿದೆ. ಹಾಗೆಯೇ ಭಜನೆಯು ಸಹ ಒಂದು ಪ್ರಸಿದ್ದ ಕಲೆಯಾಗಿದೆ. ಅನೇಕ ಭಜನಾ ಮಂಡಳಿಗಳನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಕಾಣಬಹುದು. ಭಜನೆಯು ಜಾತ್ರೆಗಳಲ್ಲಿ, ಹಬ್ಬ ದಿನಗಳಲ್ಲಿ ಮತ್ತು ಸತ್ತಾಗಲು ಭಜನೆಯನ್ನು ಬಳಸುವರು.
ಅಸಾದಿಗಳು ಸ್ತ್ರೀ ದೇವತೆಯ ಆರಾಧಕರು. ಇವರು ಆ ದೇವತೆಗಳಿಗೆ ಸಂಬAಧಿಸಿದAತಹ ಹಾಡುಗಳನ್ನಲ್ಲದೆ ಬೇರೆ ಹಾಡುಗಳನ್ನು ಹಾಡುವುದಿಲ್ಲ. ತಮ್ಮ ದೇವತೆಯ ಎದುರಿನಲ್ಲಿ ದೀಕ್ಷೆ ಪಡೆದ ಆ ನಂತರವೇ ಅಸಾದಿ ಎನಿಸಿಕೊಳ್ಳುವ ಯೋಗ್ಯತೆ ಬರುವುದು. ಅಮ್ಮನ ಪವಾಡಗಳನ್ನು ಕಥೆಗಳನ್ನು ಹೇಳುವರು
ಆಧಾರ ಗ್ರಂಥಗಳು
೧. ಡಾ.ಚಿಕ್ಕಣ್ಣ ಯಣ್ಣೆಕಟ್ಟೆ- ಚಿತ್ರದುರ್ಗ ಜಿಲ್ಲೆಯ ಜನಪದ ಕಲಾವಿದರು: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ,೨೦೦೮
೨.ಪ್ರೊ. ಲಕ್ಷ್ಮಣ್ ತೆಲಗಾವಿ - ಚಿತ್ರದುರ್ಗಕ್ಕೆ ಬನ್ನಿ: ರವಿದಾಸ ಪ್ರಕಾಶನ ಧಾರವಾಡ,
೩.ಮೀರಾಸಾಬಿಹಳ್ಳಿ ಶಿವಣ್ಣ - ದುರುಗದ ಜನಪದ. ೧೯೯೯
೪. ವಿರೂಪಾಕ್ಷ ಪೂಜಾರಹಳ್ಳಿ, - ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ವೀರರು, ೨೦೧೨
೫.ತೀ.ನಂ. ಶಂಕರನಾರಾಯಣ. - ಕಾಡುಗೊಲ್ಲರ ನಂಬಿಕೆ ಮತ್ತು ಸಂಪ್ರದಾಯಗಳು, ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ, ೧೯೮೨
Comments